ಧರ್ಮಸ್ಥಳದ ಬಾಹುಬಲಿಗೆ ಫೆ. 9 ರಿಂದ 18ರ ವರೆಗೆ ಮಹಾಮಸ್ತಕಾಭಿಷೇಕ..!!

ಮಂಜುನಾಥ ಸ್ವಾಮಿ ಎಂದರೆ ಸಾಕು ಥಟ್ ಅಂತ ನೆನಪಿಗೆ ಬರೋದು ಧರ್ಮಸ್ಥಳ.. ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ಕಳೆದು ಪುಣ್ಯ ಬರುತ್ತದೆ ಎನ್ನುವುದು ಭಕ್ತರ ವಾಡಿಕೆ.. ಇದೀಗ ಧರ್ಮಸ್ಥಳದಲ್ಲಿ ಫೆ.9 ರಿಂದ 18 ರ ವರೆಗೆ ಧರ್ಮಸ್ಥಳದ ಶ್ರೀ ಬಾಹುಬಲಿಯ 39 ಅಡಿ ಎತ್ತರದ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ತಿಳಿಸಿದರು.ಮಹಾಮಸ್ತಕಾಭಿಷೇಕಕ್ಕೆ ನಾಡಿನ ಅನೇಕ ಮುನಿಗಳು, ಬಟ್ಟಾರಕರು, ತ್ಯಾಗಿಗಳು ಮಹೋತ್ಸವದಲ್ಲಿ ಉಪಸ್ಥಿತರಿರಲಿದ್ದಾರೆ.
108 ಆಚಾರ್ಯ ವರ್ಧಮಾನ ಸಾಗರ್ ಜಿ ಮಹಾರಾಜ್ ಮತ್ತು 108 ಆಚಾರ್ಯ ಪುಷ್ಪದಂತ ಸಾಗರ್ ಜಿ ಮಹಾರಾಜ್, ಶ್ರವಣಬೆಳಗೊಳದ ಕರ್ಮಯೋಗಿ ಸ್ವಸ್ಥಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾರ್ಗದರ್ಶನ, ಕಾರ್ಕಳ ದಾನಾಶಾಲ ಮಠದ ಸ್ವಸ್ಥಿ ಶ್ರೀ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಿ.ಆರ್. ವಾಲಾ, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವರು, ಸಂಸದರು, ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ ಎಂದು ಹೆಗ್ಗೆಡೆ ತಿಳಿಸಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಫಾಲ್ಗೊಳ್ಳಲು ಕರೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಹುಬಲಿಯ ಜೊತೆಗೆ ಮಂಜುನಾಥ ಸ್ವಾಮಿಯನ್ನು ಕಣ್ತುಂಬಿಕೊಳ್ಳಿ…
Comments