ಮನಕಲಕುವ ಸ್ಟೋರಿ…! ಮಗುವಿನಾಸೆಗಾಗಿ ಆ ಮಹಾತಾಯಿ ಮಾಡಿದ್ದೇನು…?
ಇದೆಂಥಾ ಆಸೆನಪ್ಪಾ…,ಮಕ್ಕಳಿಲ್ಲದವರು ಯಾವುದಾದರೊಂದು ಮಗುವಾದ್ರೆ ಸಾಕು ಅಂತಾರೆ. ಆದರೆ ಇಲ್ಲೊಬ್ಬ ತಾಯಿ ಇದೇ ಮಗು ಬೇಕು ಅಂಥಾ ಹೇಳಿ ಪ್ರಾಣ ತೊರೆದ ವಿಚಿತ್ರ ಘಟನೆಯೊಂದು ಮಹರಾಷ್ಟ್ರದಲ್ಲಿ ನಡೆದಿದೆ. ಇನ್ನೂ ಸ್ತ್ರೀಯರು ಇದೇ ಮಗುಬೇಕು , ಗಂಡುಮಗುವನ್ನೇ ಹೆರಬೇಕು ಎನ್ನುವ ಮಹಿಳಯರು ಇದ್ದಾರೆ. ಇಂತಹದ್ದೇ ಆಸೆಗೆ ಬಲಿಯಾಗಿ ಇಲ್ಲೊಬ್ಬ ತಾಯಿ ಪ್ರಾಣವನ್ನೇ ತ್ಯಜಿಸಿದ್ದಾಳೆ. ಅದೂ ಒಂದಲ್ಲಾ, ಎರಡಲ್ಲಾ ಎಂಟು ಬಾರಿ ಗರ್ಭ ಧರಿಸಿ ಒಂಭತ್ತನೇ ಬಾರಿ ಸಾವನಪ್ಪಿದ್ದಾಳೆ. 7 ಹೆಣ್ಣು ಮಕ್ಕಳನ್ನ ಹಡೆದ ಮಹಿಳೆ ಒಂಭತ್ತನೇ ಮಗುವಿನ ಹೆರಿಗೆಯಲ್ಲಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾಳೆ. ತಾನೊಂದು ಬಗೆದರೆ ದೈವವೊಂದು ಬಗೇದೀತು ಅನ್ನೋವಾಗೇ ಕೊನೆಗೆ ನವಜಾತ ಶಿಶುವಿನೊಂದಿಗೆ ಆ ಮಹಿಳೆ ಅಸು ನೀಗಿದ್ದಾರೆ.
ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಾಜಲಗಾಂವ್ ಪಟ್ಟಣದಲ್ಲಿ ನಡೆದಿದೆ.ಮೀನಾ ಏಖಂಡೆ (38) ಎಂಬ ಈಕೆ ಮಾಜಲಗಾಂವ್‌ನಲ್ಲಿ ಪಾನ್ ಶಾಪ್ ನಡೆಸುತ್ತಿದ್ದಳು. ಗಂಡು ಮಗುವಿಗಾಗಿ ಮನೆಯವರ ಒತ್ತಡವಿದ್ದ ಕಾರಣ ಎರಡು ಬಾರಿ ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಳು.ಶನಿವಾರ ಮಾಜಲಗಾಂವ್‌ನ ಆಸ್ಪತ್ರೆಗೆ ಈಕೆಯನ್ನು ದಾಖಲಿಸಿದಾಗ ಅವಧಿಪೂರ್ವ ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಇದು ಆಕಸ್ಮಿಕ ಸಾವು ಎಂದು ಪರಿಗಣಿಸಿರುವ ಪೊಲೀಸರು ಮೃತಳ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.ಮೀನಾ ಈಗಾಗಲೇ 8 ಹೆಣ್ಣು ಮಕ್ಕಳನ್ನು ಹಡೆದಿದ್ದು ಅದರಲ್ಲಿ ಒಂದು ಹೆಣ್ಣು ಮಗು ಈಗಾಗಲೇ ಸಾವನಪ್ಪಿದೆ. ಗಂಡು ಮಗು ಬೇಕೆಂಬ ಮೂಢನಂಬಿಕೆಯಿಂದ ತಾಯಿ-ಮಗು ಇಬ್ಬರು ಸಾವನ್ನಪ್ಪಿದ್ದಾರೆ.
Comments