ಕೋಟಿ ಕೋಟಿ ಸಂಪಾದಿಸುವ ಈ ಶ್ರೀಮಂತ ತೆರಿಗೆ ಕಟ್ಟಿದ್ದೆಷ್ಟು ಗೊತ್ತಾ…?

02 Jan 2019 3:51 PM | General
376 Report

ತೆರಿಗೆ ಕಟ್ಟುವ ಸೆಲೆಬ್ರಿಟಿಗಳನ್ನು ನೋಡಿದ್ದೀವಿ. ಇಲ್ಲೊಬ್ಬ ಪ್ರತಿಷ್ಠಿತ ಕಂಪನಿಯ ಸಂಸ್ಥಾಪಕರೊಬ್ಬರು ತೆರಿಗೆ ಕಟ್ಟಿದ್ದಾರೆ. ಅದು ಫ್ಲಿಪ್ ಕಾರ್ಟ್  ಸಂಸ್ಥಾಪಕ ಸಚಿನ್ ಭನ್ಸಾಲ್ ಅವರು.  2018-19ನೇ ಸಾಲಿನ ಮೊದಲ ಕ್ವಾರ್ಟರ್​​​ಗೆ ಮುಂಗಡ ತೆರಿಗೆಯಾಗಿ ₹699 ಕೋಟಿ ಪಾವತಿ​ ಮಾಡಿದ್ದಾರೆ. ಇನ್ನು ಅಮೇರಿಕಾದ ರೀಟೇಲ್ ದಿಗ್ಗಜ ವಾಲ್​ಮಾರ್ಟ್​​​​ಗೆ ಫ್ಲಿಪ್​ಕಾರ್ಟ್​ನ ತಮ್ಮ ಶೇರ್​​​​​​ ಮಾರಾಟದಿಂದ ಬಂದ ಲಾಭದ ​ ಟ್ಯಾಕ್ಸ್​ ಸೇರಿದಂತೆ ₹699 ಕೋಟಿ ತೆರಿಗೆಯನ್ನು ಸಚಿನ್​ ಭನ್ಸಾಲ್ ಪಾವತಿಸಿದ್ದಾರೆ.  ಅಂದಹಾಗೇ  ಕೋಟಿ ಕೋಟಿ ಹಣವನ್ನು ತೆರಿಗೆ ರೂಪದಲ್ಲಿ  ಕಟ್ಟಿದ್ದಾರೆ.ಇನ್ನು ಭನ್ಸಾಲ್​​ ಅವರ ಪಾರ್ಟ್ನರ್​ ಹಾಗೂ ಫ್ಲಿಪ್​​ಕಾರ್ಟ್​ ಸಹಸಂಸ್ಥಾಪಕ ಬಿನ್ನಿ ಭನ್ಸಾಲ್​ ತಮ್ಮ ಶೇರ್​​ನ ಮಾರಾಟದಿಂದ ಬಂದ ಕ್ಯಾಪಿಟಲ್​ ಗೇನ್ಸ್​ (ಲಾಭಾಂಶ) ಎಷ್ಟು ಎನ್ನುವುದನ್ನ ಇನ್ನೂ ಬಹಿರಂಗಪಡಿಸಬೇಕಿದೆ ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಫ್ಲಿಪ್​ಕಾರ್ಟ್​​ನ ತಮ್ಮ ಶೇರ್ಸ್​ ಮಾರಾಟದಿಂದ ಎಷ್ಟು ಕ್ಯಾಪಿಟಲ್​ ಗೇನ್ಸ್​ ಬಂದಿದೆ ಎನ್ನುವುದನ್ನ ಬಹಿರಂಗಪಡಿಸಲು ಸಚಿನ್​​​ ಹಾಗೂ ಬಿನ್ನಿ ಭನ್ಸಾಲ್​ ಸೇರಿದಂತೆ ಇನ್ನಿತರೆ ಪಾಲುದಾರರಿಗೆ, ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿತ್ತು.  ಹಾಗೇ ವಾಲ್​ಮಾರ್ಟ್​​ಗೂ ಕೂಡ ನೋಟಿಸ್​ ಜಾರಿ ಮಾಡಲಾಗಿತ್ತು. ಕಳೆದ ವರ್ಷದ ಕೊನೆಯಲ್ಲಿ ವಾಲ್​ಮಾರ್ಟ್​​ ಆದಾಯ ತೆರಿಗೆ ಇಲಾಖೆಗೆ ₹7,440 ಕೋಟಿ ತೆರಿಗೆ(ವಿತ್​​ಹೋಲ್ಡಿಂಗ್​​ ಟ್ಯಾಕ್ಸ್​​) ಪಾವತಿ ಮಾಡಿತ್ತು. ಬಳಿಕ ಈ ಡೀಲ್​​ನಿಂದ ಪ್ರತಿಯೊಬ್ಬರಿಗೆ ಎಷ್ಟು ಲಾಭ ಬಂದಿದೆ ಎಂಬ ಬಗ್ಗೆ ಹಾಗೂ ಫ್ಲಿಪ್​ಕಾರ್ಟ್​​ನ 46 ಷೇರುದಾರರ ಬಗ್ಗೆ ಮಾಹಿತಿ ನೀಡುವಂತೆ ವಾಲ್​​ಮಾರ್ಟ್​​ಗೆ ಕೇಳಲಾಗಿತ್ತು. ಮೂಲಗಳ ಪ್ರಕಾರ, ಸಚಿನ್​ ಹಾಗೂ ಬಿನ್ನಿ ಭನ್ಸಾಲ್​​, ಫ್ಲಿಪ್​ಕಾರ್ಟ್​ ಮಾರಾಟದಿಂದ ಬಂದ ಒಟ್ಟು ಹಣ ಎಷ್ಟು? ಕ್ಯಾಪಿಟಲ್​ ಗೇನ್ಸ್​​ ತೆರಿಗೆ ಎಷ್ಟು ಹಾಗೂ ತೆರಿಗೆ ಪಾವತಿಯ ಶೆಡ್ಯೂಲ್​ ಬಗ್ಗೆ ವಿವರಿಸಿಲ್ಲ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಕ್ವಾರ್ಟರ್​​ನ ಮುಂಗಡ ತೆರಿಗೆಯಾಗಿ ಸಚಿನ್​ ಭನ್ಸಾಲ್​​​​ ಈಗ ₹699 ಕೋಟಿ ಪಾವತಿಸಿದ್ದಾರೆ.

ಉದ್ಯಮಿ ಸಚಿನ್ ಅಂದಹಾಗೇ ಸಂಸ್ಥೆಯಿಂದ ಬಂದ ಲಾಭವನ್ನು ಪಾಲು ಮಾಡಿಕೊಂಡಿದ್ದೂ ಬಂದಂತಹ ಲಾಭದಲ್ಲಿಯೇ ಟ್ಯಾಕ್ಸ್ ಕಟ್ಟಿದ್ದಾರೆ. ದೇಶದ ಆರ್ಥಿಕತೆಗೆ ತೆರಿಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಪ್ರತೀಯೊಬ್ಬರು ಕೂಡ ಟ್ಯಾಕ್ಸ್ ಗೆ ಬದ್ಧರಾಗಬೇಕು. ಆ ಮೂಲಕ ದೇಶದ ಹಣಕಾಸಿನ ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲಬೇಕು ಎಂದಿದ್ದಾರೆ.

Edited By

Manjula M

Reported By

Manjula M

Comments