ಮೃತ ಭಿಕ್ಷುಕನ ಬಳಿ ಸಿಕ್ಕಿದು ಎಷ್ಟು ಹಣ ಗೊತ್ತಾ..!?

02 Jan 2019 9:45 AM | General
406 Report

ಭಿಕ್ಷುಕ ಅಂದರೆ ಸಾಕು ಮೂಗು ಮುರಿಯೋರೆ ಹೆಚ್ಚು… ಅಲ್ಲಿ ಇಲ್ಲಿ ಭಿಕ್ಷೆ ಬೇಡಿಕೊಂಡು ತಿನ್ನುತ್ತಾರೆ… ಸಧ್ಯ ಅವರ ಬಳಿ ಕನಿಷ್ಟ ಪಕ್ಷ ಒಂದು ನೂರು ರೂಪಾಯಿ ಇದ್ದರೆ ಹೆಚ್ಚು… ಆದರೆ ಇಲ್ಲೊಬ್ಬ ಭಿಕ್ಷುಕನ ಬಳಿ ಬರೋಬ್ಬರಿ  96,000 ರೂ ಪತ್ತೆಯಾಗಿದೆ. ಆದರೆ ಆ ಭಿಕ್ಷುಕ ಜೀವಂತವಾಗಿಲ್ಲ.. ಮೃತಪಟ್ಟ ಭಿಕ್ಷುಕನ ಆತನ ಬಳಿ .96 ಸಾವಿರ ಪತ್ತೆಯಾದ ಘಟನೆ ಬೆಂಗಳೂರಿನ ಕಂಟನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ಷರೀಫ್‌ (70) ಎಂದು ಗುರುತಿಸಲಾಗಿದೆ. ಷರೀಫ್‌ 12 ವರ್ಷಗಳಿಂದ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿದ್ದರು.

ಕಳೆದ ಐದು ವರ್ಷಗಳಿಂದ ಷರೀಫ್‌ರಿಗೆ ಗ್ಯಾಂಗ್ರಿನ್‌ ಆಗಿದ್ದರಿಂದ ಕಾಲೊಂದನ್ನು ಕತ್ತರಿಸಿ ಕೃತಕ ಕಾಲು ಜೋಡಿಸಲಾಗಿತ್ತು... ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಷರೀಫ್‌ ರೈಲ್ವೆ ನಿಲ್ದಾಣದ ಬಳಿ ಮೂತ್ರ ಮಾಡಲು ತೆರಳಿದ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಷರೀಫ್‌ ಅವರ ಕೃತಕ ಪ್ಲಾಸ್ಟಿಕ್‌ ಕಾಲಿನಲ್ಲಿ 500, 100, 50 ಹಾಗೂ 20 ಮುಖ ಬೆಲೆಯ ಒಟ್ಟು .96,700 ಹಣ ಪತ್ತೆಯಾಗಿದೆ. ಮೃತ ಭಿಕ್ಷುಕ ಭಿಕ್ಷೆ ಬೇಡಿ ಕೂಡಿಟ್ಟಿರುವ ಹಣ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಯಾರು ಇಲ್ಲದ ಕಾರಣ ಹಣವನ್ನು ಜಪ್ತಿ ಮಾಡಲಾಗಿದ್ದು, ಸಹಜವಾಗಿ ಮೃತಪಟ್ಟಿದ್ದಾರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

Edited By

Manjula M

Reported By

Manjula M

Comments