ನ್ಯೂ ಇಯರ್ ಎಫೆಕ್ಟ್ : ಇಂದು ರಾತ್ರಿ ಚಾಮುಂಡಿ ಬೆಟ್ಟ ಸಂಚಾರಕ್ಕೆ ಬ್ರೇಕ್..!!

ಹೊಸ ವರ್ಷ ಬಂತು ಅಂದರೆ ಸಾಕು … ಎಲ್ಲರಿಗೂ ಖುಷಿ.. ಮೋಜು ಮಸ್ತಿ ಮಾಡೋದಕ್ಕೆ ಅಂತಾನೆ ಸಿಕ್ಕಾಪಟ್ಟೆ ಫ್ಲಾನ್ ಮಾಡಿಕೊಂಡಿರುತ್ತಾರೆ.. ಪ್ರೆಂಡ್ಸ್ ..ಪ್ಯಾಮಿಲಿ ಎಲ್ಲ ಒಂದು ಕಡೆ ಸೇರಿ ಹಳೇ ವರ್ಷಕ್ಕೆ ಬಾಯ್ ಹೇಳಿ ಹೊಸ ವರ್ಷವನ್ನು ತುಂಬಾ ಸಂಭ್ರಮದಿಂದ ಬರ ಮಾಡಿಕೊಳ್ಳುತ್ತಾರೆ.. ಹೊಸ ವರ್ಷ ಆಚರಣೆಗಾಗಿ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿಷೇಧಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ರ ವರೆಗೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಜೊತೆಗೆ ಹಿನಕಲ್ ಪ್ಲೈ ಓವರ್ ನಲ್ಲೂ ಕೂಡ ಹೊಸ ವರ್ಷ ಆಚರಣೆ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಇನ್ನು ನಗರದ ಹೋಟೆಲ್, ಕ್ಲಬ್, ರೆಸ್ಟೋರೆಂಟ್, ರೆಸಾರ್ಟ್, ಬಾರ್ ಗಳಲ್ಲಿ ಮಧ್ಯರಾತ್ರಿ 1 ರ ವರೆಗೆ ಮದ್ಯ ಸರಬರಾಜು ಮಾಡಬೇಕಾದರೆ ಅಬಕಾರಿ ಇಲಾಖೆ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ವರ್ಷದ ಆಚರಣೆಯಲ್ಲಿ ಪಾರ್ಟಿ ಮಾಡುವ ಮುನ್ನ ಹುಷಾರ್, ಕುಡಿದು ವಾಹನ ಚಾಲನೆ ಮಾಡಿದರೆ ದಂಡ ಬೀಳೋದು ಗ್ಯಾರಂಟಿ. ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿ ವಾಹನ ಚಲಾಯಿಸಿದರೆ ದಂಡ ಹಾಕಲು ಪೊಲೀಸರು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿದ್ದಾರೆ.
Comments