ಬಾಲಕರಿಂದ ತಪ್ಪಿತು ದೊಡ್ಡ ರೈಲು ದುರಂತ..!!

ಪುಟ್ಟಮಕ್ಕಳು ಒಮ್ಮೊಮ್ಮೆ ತುಂಬಾ ತಲೆಹರಟೆ ಮಾಡುತ್ತಿರುತ್ತಾರೆ. ಇದರಿಂದ ಕೆಲವೊಮ್ಮೆ ಪೋಷಕರಿಗೆ ಕಿರಿಕಿರಿ ಆಗುವುದು ಉಂಟು.. ಆದರೆ ಹಣ್ಣು ಕೀಳಲು ಹೋದ ಇಬ್ಬರು ಬಾಲಕರ ಸಮಯ ಪ್ರಜ್ಞೆಯಿಂದ ರೈಲ್ವೆ ಅವಘಡವೊಂದು ತಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ನಡೆದಿದೆ.ಮಕ್ಕಳ ಈ ಕೆಲಸಕ್ಕೆ ಬಾರೀ ಮೆಚ್ಚುಗೆ ವ್ಯಕ್ತವಾಗಿದ್ದು. ಆಟವಾಡಿಕೊಂಡು ಇದ್ದ ಮಕ್ಕಳಿಂದ ಇಷ್ಟು ದೊಡ್ಡ ತಪ್ಪಿದೆ ಎಂಬುದೆ ನಂಬಲು ಸಾಧ್ಯವಿಲ್ಲದಂತಹ ಮಾತು.. ಹಾಗಾಗಿ ಇರಬೇಕು ಮಕ್ಕಳನ್ನು ದೇವರ ಪ್ರತಿರೂಪ ಎನ್ನುವುದು.
ಮಂಜುನಾಥ್ ಹಾಗೂ ಶಶಿಕುಮಾರ್ ರೈಲು ಅವಘಡ ತಪ್ಪಿಸಿದ ವಿದ್ಯಾರ್ಥಿಗಳಾಗಿದ್ದಾರೆ. ಇವರಿಬ್ಬರು ಕುಮಟ ಪಟ್ಟಣದ ನೆಲ್ಲಿಕೇರಿಯ ವಿದ್ಯಾರ್ಥಿಗಳಾಗಿದ್ದು, ಶನಿವಾರ ಸಂಜೆ ರೈಲು ಹಳಿ ಬಳಿ ಹಣ್ಣು ಕೀಳಲು ತೆರಳಿದ್ದರು. ಈ ವೇಳೆ ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದ್ದನ್ನು ಗಮನಿಸಿದ್ದರು. ಈ ವೇಳೆ ಇಬ್ಬರು ಬಾಲಕರು ರೈಲ್ವೆ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮಾಹಿತಿ ಪಡೆದ ತಕ್ಷಣ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ದುರಸ್ತಿ ಕಾರ್ಯ ಮಾಡುವ ಮೂಲಕ ಅನಾಹುತವನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ. ಮಂಜುನಾಥ್ ಹಾಗೂ ಶಶಿಕುಮಾರ್ ಅವರ ಈ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.
Comments