ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇನ್ಮುಂದೆ ಕೇಳಿ ಬರಲಿದೆ ಕನ್ನಡ ಕಲರವ..!!

ಕನ್ನಡ ಎಂದರೆ ಸಾಕು ಹೆಚ್ಚಾಗಿ ಮೂಗು ಮುರಿಯೋರೇ ಹೆಚ್ಚು … ಕನ್ನಡ ಬಂದರೂ ಕೂಡ ಕನ್ನಡವನ್ನು ಮಾತಾಡೋದೆ ಇಲ್ಲ. ಇದೆಲ್ಲದರ ನಡುವೆ ಇದೀಗ ದೇಶದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಲ್ಲಿಯೂ ಹಾಗೂ ಪ್ರಯಾಣಿಕ ಹಾಗೂ ಸಾರ್ವಜನಿಕ ಪ್ರಕಟಣೆಯನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಿ ಅನಂತರ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾಡಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶವನ್ನು ಹೊರಡಿಸಿದೆ.
ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣಗಳಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಕನ್ನಡ ಪ್ರಕಟಣೆ ಕೇಳಿಸಲಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆ ಹೇರಲಾಗುತ್ತಿದೆ ಎಂಬ ಕೂಗು ವರ್ಷಗಳ ಹಿಂದೆಯೇ ತುಂಬಾ ಸದ್ದು ಮಾಡಿತ್ತು. ಈ ವೇಳೆ ಕೇಂದ್ರದ ವಿರುದ್ಧ ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಇದೀಗ ವಿಮಾನ ನಿಲ್ದಾಣಗಳಲ್ಲಿ ಕನ್ನಡ ಭಾಷೆಯು ಕೇಳಿಸುತ್ತದೆ…
Comments