ಗರ್ಭಿಣಿಯರ ಪಾಲಿನ ದೇವರಾದ ಸೂಲಗಿತ್ತಿ ನರಸಮ್ಮ ಇನ್ನಿಲ್ಲ
ಎಷ್ಟೋ ಗರ್ಭಿಣಿಯರಿಗೆ ಈಕೆ ನಿಜ ದೇವತೆ.. ಎಷ್ಟೋ ಮಕ್ಕಳ ಪಾಲಿಗೆ ಅಮ್ಮ… ಅಂತಹ ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ(98) ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಪಾವಗಡ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ನರಸಮ್ಮ ಅವರಿಗೆ 4 ಮಂದಿ ಹೆಣ್ಣು ಮಕ್ಕಳು, 4 ಮಂದಿ ಗಂಡು ಮಕ್ಕಳು ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಆಗಲಿದ್ದಾರೆ.ಗರ್ಭಿಣಿಯರ ಹೊಟ್ಟೆಯ ಮೇಲೆ ಅವರು ಕೈ ಇಟ್ಟರೆ ಸಾಕು. ಹೊಟ್ಟೆಯಲ್ಲಿ ಮಗು ಹೇಗೆ ಬೆಳೆದಿದೆ. ಅದರ ಆರೋಗ್ಯ ಹೇಗಿದೆ. ಹೆಣ್ಣು ಮಗುವೊ, ಗಂಡು ಮಗುವೊ ಎಂಬುದನ್ನು ಹೇಳುತ್ತಾರೆ. ಅಂತಹ ಅದ್ಭುತ ಶಕ್ತಿಯನ್ನು ನರಸಮ್ಮನವರು ಹೊಂದಿದ್ದರು. ಇದೀಗ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
Comments