ಪಬ್ ಜೀ ಗೇಮ್ ಬ್ಯಾನ್ ಆಗುತ್ತಾ..!!??
ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಆನ್ ಲೈನ್ ಗೇಮ್ ಗಳು ಅಬ್ಬರಿಸುತ್ತಿವೆ.. ಮಕ್ಕಳು ಅಷ್ಟೆ ಅಲ್ಲ ದೊಡ್ಡವರು ಕೂಡ ಈ ಆನ್ ಲೈನ್ ಗೇಮ್ ಗೆ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಪಬ್ ಜೀ ಕೂಡ ಒಂದು.. ಇದರಿಂದ ಮಕ್ಕಳಿಗೆ ಮಾನಸಿಕವಾಗಿ ತೊಂದರೆಯಾಗುತ್ತದೆ ಎಂಬುದು ತಿಳಿದು ಬಂದಿದೆ. ಅಷ್ಟೆ ಅಲ್ಲದೆ ಇತ್ತೀಚೆಗೆ ವೈರಲ್ ಆಗಿದ್ದ ಪಬ್ ಜಿ ಆನ್‌ಲೈನ್ ಗೇಮ್ ಅನ್ನು ಮಹಾರಾಷ್ಟ್ರ ಹೈಕೋರ್ಟ್ ಬ್ಯಾನ್ ಮಾಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಈಗಾಗಲೇ ಹಲವು ದೇಶಗಳು ಈ ಆಟದ ವಿರುದ್ಧ ಕ್ರಮ ಕೈಗೊಂಡಿವೆ. ಹಾಗಾಗಿ ರಾಜ್ಯದಲ್ಲಿ ಪಬ್‌ಜಿ ಯನ್ನು ನಿಷೇಧಿಸಲಾಗುತ್ತಿದೆ. ಎಲ್ಲಿಯಾದರೂ ಪಬ್ ಜಿ ಆಟವಾಡುವುದು ಕಂಡುಬಂದರೆ ಗೇಮ್ಸ್ ಕಾರ್ಪೋರೇಶನ್‌ಗೆ ನೋಟೀಸ್ ನೀಡಲಾಗುವುದು-ಕೆ.ಶ್ರೀನಿವಾಸುಲು, ಮಹಾರಾಷ್ಟ್ರ ಹೈಕೋರ್ಟ್' ಎಂದು ಬರೆಯಲಾಗಿದೆ.ಈ ಪ್ರಕಟಣೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ಮಹಾರಾಷ್ಟ್ರ ಹೈಕೋರ್ಟ್ ಪಬ್ ಜಿಯನ್ನು ಬ್ಯಾನ್ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ಸಾಬೀತಾಗಿದೆ.
Comments