ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ:100ರೂ ನಾಣ್ಯ ಬಿಡುಗಡೆ ಮಾಡಿದ ನಮೋ

ನೋಟ್ ಬ್ಯಾನ್ ಆದ ಮೇಲೆ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸಬೇಕಾಯಿತು…ಸರಿಯಾದ ಸಮಯಕ್ಕೆ ಸಿಗಬೇಕಾದ ಹಣ ಸಿಗದೆ ಪರದಾಡುವಂತಾಯಿತು.. ಇದೀಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 94ನೇ ಜಯಂತಿ ಪ್ರಯುಕ್ತ ಅಟಲ್ ಸ್ಮರಣಾರ್ಥ ಹೊರತರಲಾದ 100ರೂ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಈ ನಾಣ್ಯವನ್ನು ಬೆಳ್ಳಿ, ಕಂಚು, ನಿಕಲ್ ಮತ್ತು ಸತು (ಝಿಂಕ್) ನಿಂದ ತಯಾರಿಸಲಾಗಿದ್ದು, ಇದರ ತೂಕ 35 ಗ್ರಾಂ ಇದೆ.
ಈ 100 ರೂ ನಾಣ್ಯದಲ್ಲಿ ಅಶೋಕ ಸ್ತಂಭದ ಮತ್ತು ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೇ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಭಾರತ್ ಎಂದು ಬರೆದಿದ್ದು, ಬಲಭಾಗದಲ್ಲಿ ಇಂಗ್ಲಿಷ್‍ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಅವರು, ವಾಜಪೇಯಿ ಅವರದು ಬಿಜೆಪಿ ಧ್ವನಿ ಮಾತ್ರವಾಗಿರಲಿಲ್ಲ. ಜನಸಾಮಾನ್ಯರ ಧ್ವನಿ ಕೂಡ ಆಗಿದ್ದರು ಎಂದರು. ವಾಜಪೇಯಿ ತನ್ನ ಇಡೀ ರಾಜಕೀಯ ಜೀವನವನ್ನು ವಿರೋಧ ಪಕ್ಷದಲ್ಲಿಯೇ ಕಳೆದರು. ಅಧಿಕಾರಕ್ಕಾಗಿ ಎಂದಿಗೂ ಆಸೆ ಪಡಲಿಲ್ಲ. ಅಧಿಕಾರಕ್ಕಾಗಿ ತತ್ವ, ಸಿದ್ಧಾಂತಗಳೊಂದಿಗೆ ರಾಜಿ ಆಗಲಿಲ್ಲ. ಸದಾ ದೇಶ ಮತ್ತು ದೇಶದ ಜನರಿಗಾಗಿ ಅವರು ಬದುಕಿದರು ಎಂದು ಮೋದಿ ವಾಜುಪೇಯಿ ಅವರನ್ನು ಬಣ್ಣಿಸಿದರು.
Comments