ಡಿಸೆಂಬರ್ 26 ಕ್ಕೆ ಬ್ಯಾಂಕ್ 'ಬಂದ್': ಇನ್ನೆರಡು ದಿನ ಬ್ಯಾಂಕ್ ಇರಲ್ಲ..!!
ಇತ್ತಿಚಿಗೆ ಬ್ಯಾಂಕ್ ಒಂದು ದಿನ ರಜೆ ಇದ್ದರೆ ಸಾಕು ಒಂದಷ್ಟು ಕೆಲಸಗಳು ಹಾಗೆಯೇ ಉಳಿದುಕೊಂಡು ಬಿಡುತ್ವೆ..ಹಣಕಾಸು ವ್ಯವಹಾರಕ್ಕೆ ಸ್ವಲ್ಪ ಕಷ್ಟ ಆಗಬಹುದು... ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮವಾಗಿ ಒಟ್ಟು 5 ದಿನ ಬ್ಯಾಂಕ್ ಬಂದ್ ಆಗಿರಲಿವೆ ಎನ್ನಲಾಗಿದ್ದು ಅದರಲ್ಲಿ 2 ದಿನ ಕಳೆದುಹೋಗಿದೆ.. ಇನ್ನೂ ನಾಳೆ ಕ್ರಿಸ್ ಮಸ್ ಇರುವ ಕಾರಣ ರಜೆ ಇರುತ್ತದೆ, ಮತ್ತೆ 26ಕ್ಕೆ ಮುಷ್ಕರ ನಡೆಯಲಿದ್ದು ಅಂದು ಕೂಡ ಬ್ಯಾಂಗ್ ರಜೆ ಇರುತ್ತದೆ. 3 ಬ್ಯಾಂಕುಗಳ ವಿಲೀನ ವಿರೋಧಿಸಿ ಬ್ಯಾಂಕ್ ಉದ್ಯೋಗಿಗಳು ಡಿಸೆಂಬರ್ 26 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಮುಂದಾಗಿದ್ದಾರೆ .
ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ಇದಕ್ಕೆ ಉದ್ಯೋಗಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 26 ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಶುಕ್ರವಾರದಂದು ಸಹ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕ್ ಅಧಿಕಾರಿಗಳು ಮುಷ್ಕರ ನಡೆಸಿದ್ದರು. ಇಂದು ಬ್ಯಾಂಕುಗಳು ಕಾರ್ಯ ನಿರ್ವಹಿಸಲಿದ್ದು, ನಾಳೆ ಕ್ರಿಸ್ಮಸ್ ಪ್ರಯುಕ್ತ ರಜೆ ಇರಲಿದೆ. ಡಿಸೆಂಬರ್ 26 ಮುಷ್ಕರದ ಕಾರಣಕ್ಕೆ ಬ್ಯಾಂಕುಗಳು ಬಂದ್ ಆಗಲಿವೆ ಎನ್ನಲಾಗಿದೆ.
Comments