ಬೆಂಗಳೂರಿನ ಈ ಜಾಗಕ್ಕೆ ಅಂಬಿ ಹೆಸರು ಮರು ನಾಮಕರಣ..!?

ಸ್ಯಾಂಡಲ್ವುಡ್ ಇತ್ತೀಚೆಗೆ ಮರೆಯಲಾರದ ಮಾಣಿಕ್ಯವನ್ನು ಕಳೆದುಕೊಂಡಿತು. ಈ ಹಿನ್ನಲೆಯಲ್ಲಿ ನಿಧನರಾದ ನಟ ಅಂಬರೀಷ್ ಅವರ ಹೆಸರನ್ನು ರೇಸ್‌ಕೋರ್ಸ್ ರಸ್ತೆ ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದ್ದು, ಡಿ.26ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ತಿಂಗಳ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಅಂಬರೀಷ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಬಹುತೇಕ ಪಾಲಿಕೆ ಸದಸ್ಯರು, ಅಂಬರೀಷ್ ಅವರು ಕನ್ನಡ ಚಿತ್ರರಂಗ ಹಾಗೂ ರಾಜಕಾರಣಿಯಾಗಿ ಸಲ್ಲಿಸಿದ ಸೇವೆಯ ಕುರಿತು ಸ್ಮರಿಸಿದ ಹೆಚ್ಚಿನ ಸದಸ್ಯರು, ನಗರದ ಪ್ರಮುಖ ರಸ್ತೆ ಅಥವಾ ಕಟ್ಟಡಕ್ಕೆ ಅಂಬರೀಷ್ ಅವರ ಹೆಸರು ನಾಮಕರಣ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅಂಬರೀಶ್ ಅವರ ಹೆಸರಿಗೆ ಗೌರವ ಸಲ್ಲಿಸಿದ ಆಗೆ ಆಗುತ್ತದೆ. ಇದರಿಂದ ಅಭಿಮಾನಿಗಳಿಗೂ ಖುಷಿಯಾಗುತ್ತದೆ.
Comments