ರೈತರಿಗೆ ಗುಡ್ ನ್ಯೂಸ್ : ಪಿಎಲ್ ಡಿ ಬ್ಯಾಂಕ್ ಗಳ ವರ್ಷದ ಬಡ್ಡಿ ಮನ್ನಾ..!?
ರಾಜ್ಯ ಸರ್ಕಾರದಿಂದ ರೈತರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ.. ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್ ಡಿ) ದೀರ್ಘಾವಧಿ ಸಾಲದ ಮೇಲಿನ 2017-18 ನೇ ಸಾಲಿನ ಬಡ್ಡಿ ಮನ್ನಾಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.. ಇದರಿಂದ ರೈತರಿಗೆ ಅನುಕೂಲವಾಗಲಿದೆ.
ರೈತರ ಸಾಲ ಮನ್ನಾ ಮಾಡಬೇಕು ಎಂಬ ತೀರ್ಮಾನ ಹೊರಬಿದ್ದ ನಂತರ ಪಿಎಲ್ ಡಿ ಬ್ಯಾಂಕ್ ಗಳಲ್ಲಿ ಸಾಲ ಪಡೆದವರೂ ಮರುಪಾವತಿ ಮಾಡುವುದನ್ನು ನಿಲ್ಲಿಸಿದ್ದು, ಇಂತಹ ಬ್ಯಾಂಕ್ ಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಬಡ್ಡಿ ಮನ್ನಾ ಮಾಡಿದರೆ ಸಾಲದ ಅಸಲು ಮರುಪಾವತಿಯಾಗುವ ನಿರೀಕ್ಷೆಯಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಪಿಎಲ್ ಡಿ ಬ್ಯಾಂಕ್ ಗಳ 2017-18 ನೇ ಸಾಲಿನ ಬಡ್ಡಿ ಮೊತ್ತವನ್ನು ಮನ್ನಾ ಮಾಡುವ ಕುರಿತಂತೆ ಸಹಕಾರ ಇಲಾಖೆ ಮೂಲಕ ಸಿಎಂಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ. ಒಟ್ಟಾರೆ ಸಾಲ ಮನ್ನಾ ಆದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗುತ್ತದೆ.
Comments