ಸಿದ್ದಗಂಗಾ ಶ್ರೀಗಳಿಗೆ ಇನ್ನೂ ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ..!!
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಇತ್ತಿಚಿಗೆ ಚೇತರಿಕೆ ಕಂಡು ಬಂದಿದ್ದು, ನ್ಯೂಟ್ರಿಷನ್ ಗಳನ್ನು ನೀಡಲಾಗುತ್ತಿದ್ದು, ಇನ್ನೂ ಒಂದು ವಾರಗಳ ಕಾಲ ಐಸಿಯುನಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ರೇಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಡಾ. ಪರಮೇಶ್ವರ್, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.
ಎಂದಿನಂತೆ ರಕ್ತನಾಳ ಮೂಲಕವೇ ನ್ಯೂಟ್ರೀಷನ್ ಗಳನ್ನು ನೀಡಲಾಗುತ್ತಿದೆ. ಶ್ರೀಗಳಿಗೆ ಇನ್ನೂ ಒಂದು ವಾರಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು... ಶ್ರೀಗಳಿಗೆ ಯಾವುದೇ ಸೋಂಕು ತಗಲದಂತೆ ನೋಡಿಕೊಳ್ಳಲಾಗುತ್ತಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಪ್ರೋಟೀನ್ ಮತ್ತು ನ್ಯೂಟ್ರೀಷನ್ ಕೊರತೆ ಇದ್ದು, ಸರಿಯಾದ ಪ್ರಮಾಣದಲ್ಲಿ ನ್ಯೂಟ್ರೀಷನ್ ನೀಡಲಾಗುತ್ತಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಭಕ್ತಾದಿಗಳು ದೇವರ ಮೊರೆಹೋಗಿದ್ದಾರೆ.
Comments