ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಿಚ್ಚಗುತ್ತಿ ಮಾರಮ್ಮ ದೇವಾಲಯಕ್ಕೆ ಬೀಗ..!!

ಸುಳ್ವಾಡಿ ಗ್ರಾಮದಲ್ಲಿ ನಿನ್ನೆ ನಡೆದ ವಿಷ ಪ್ರಸಾದ ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಿಚ್ಚಗುತ್ತಿ ಮಾರಮ್ಮ ದೇವಾಲಯಕ್ಕೆ ಬೀಗ ಹಾಕಲಾಗಿದೆ. ನಿನ್ನೆ ನಡೆದ ವಿಷ ಪ್ರಸಾದ ದುರಂತಕ್ಕೆ 11 ಕ್ಕೂ ಹೆಚ್ಚು ಭಕ್ತರು ಬಲಿಯಾಗಿರುವುದರ ಹಿನ್ನೆಲೆಯಲ್ಲಿ ಶನಿವಾರ ದೇವಾಲಯದ ಬಾಗಿಲನ್ನು ಮುಚ್ಚಲಾಗಿದೆ.
ಕೇವಲ ಭಕ್ತಾಧಿಗಳಷ್ಟೆ ಅಲ್ಲದೆ ಪ್ರಸಾದ ತಿಂದ ಪಕ್ಷಿಗಳು ಕೂಡ ಸಾವನ್ನಪ್ಪಿವೆ.ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ಕಿಚ್ಚಗುತ್ತಿ ದೇವಾಲಯದಲ್ಲಿ ಈಗ ನೀರವ ಮೌನ ಆವರಿಸಿದ್ದು, ಇದೇ ಮೊದಲ ಬಾರಿಗೆ ದೇವಾಲಯದ ಬಾಗಿಲು ಬಂದ್ ಆಗಿದೆ. ಘಟನೆಯಲ್ಲಿ ಅರ್ಚಕರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಇಡೀ ಗ್ರಾಮವೇ ತತ್ತರಿಸಿದೆ. ಆದರೆ ಕಾರಣ ಏನು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ
Comments