ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನಾಳೆ, ನಾಡಿದ್ದು, ನಮ್ಮ ಮೆಟ್ರೋ ಸಂಚಾರ ಸ್ಥಗಿತ!?

ಮೇಟ್ರೋದಲ್ಲಿ ಬಿರುಕು ಬಿಟ್ಟಿರುವುದು ಬಾರಿ ಚರ್ಚೆಗೆ ಕಾರಣವಾಗಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ದುರಸ್ತಿ ಕಾರ್ಯಚರಣೆ ಪ್ರಗತಿಯಲ್ಲಿದ್ದು, ಮೆಟ್ರೋ ಸಂಚಾರವು ನಾಳೆ ನಾಡಿದ್ದು, ಸ್ಥಗಿತವಾಗಲಿದೆ ಎನ್ನಲಾಗುತ್ತಿದೆ.ಇನ್ನು ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿಯ 155ನೇ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರುಗಿದೆ. ಸದ್ಯ ದುರಸ್ಥಿ ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಖುದ್ದು ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಈ ಬಗ್ಗೆ ನಿಗವಹಿಸಿದ್ದು, ಮೆಟ್ರೋ ಸಂಚಾರವನ್ನು ಸ್ಥಗಿತ ಮಾಡಿಯಾದ್ರೂ ಕೆಲಸಗಳನ್ನು ಸರಿಯಾಗಿ ಮಾಡಿದ ಬಳಿಕ ಮೆಟ್ರೋ ಸಂಚಾರವನ್ನು ಮಾಡಿ, ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ಲೋಪವಾಗಬಾರದು ಎಂದಿದ್ದಾರೆ ಇನ್ನೂ ಇದೇ ಕಾರಣಕ್ಕೆ ನಾಳೆ, ನಾಡಿದ್ದು, ಹೆಚ್ಚಿನ ಮಟ್ಟದಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡುವುದಿಲ್ಲ, ಹೀಗಾಗಿ ಶನಿವಾರ ಹಾಗೂ ಭಾನುವಾರಂದೇ ಕೆಲಸಗಳನ್ನು ಮಾಡಿದರೆ ಒಳಿತು ಎನ್ನಲಾಗಿದೆ.
Comments