ರೆಬಲ್ ಸ್ಟಾರ್ ಅಂಬಿ ನೋಡಲು ರಮ್ಯಾ ಬಾರದಿರುವುದಕ್ಕೆ ಕಾರಣ ಬಿಚ್ಚಿಟ್ಟ ಸಚಿವ ಡಿಕೆ ಶಿವಕುಮಾರ್..!!

ಸ್ಯಾಂಡಲ್ ವುಡ್ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನಲೆಯಲ್ಲಿ ರಮ್ಯಾ ಬರದೇ ಇದ್ದಿದ್ದಕ್ಕೆ ಜಲ ಸಂಪನ್ಯೂಲ ಸಚಿವರಾದ ಡಿಕೆ ಶಿವಕುಮಾರ್ ಕಾರಣವನ್ನು ನೀಡಿದ್ದಾರೆ.. ರಮ್ಯಾ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮೇಜರ್ ಪ್ರಾಬ್ಲಂ ಆಗಿದೆ. ಅವರಿಗೆ ನಡೆಯುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಅವರು ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಾನು ಕೂಡ ಫೋನ್ ಮಾಡಿ ಅಂಬರೀಶ್ ಅಂತ್ಯಕ್ರಿಯೆಗೆ ಬರುವಂತೆ ರಮ್ಯಾ ಅವರನ್ನು ಕರೆದೆ. ಅದಕ್ಕೆ ಅವರು, ‘ಇಲ್ಲ ಅಂಕಲ್ ಬರುವುದಕ್ಕೆ ಸಾಧ್ಯವಿಲ್ಲ ಜಾರಿ ಬಿದ್ದು ಕಾಲಿಗೆ ತುಂಬಾ ನೋವಾಗಿದೆ. ಆಸ್ಟಿಯೋಕ್ಲ್ಯಾಸ್ಟೋಮಾದಿಂದ ಬಳಲುತ್ತಿದ್ದೇನೆ. ಓಡಾಡಲು ಕೂಡ ಆಗುತ್ತಿಲ್ಲ’ ಎಂದರಂತೆ. ಹೀಗಾಗಿ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಿಲ್ಲ ಎಂದು ವಿಧಾನಸೌಧದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಂಗಳವಾರ ತಿಳಿಸಿದ್ದಾರೆ..
Comments