ಹೆಣ್ಣು ಮಗು ಹುಟ್ಟಿತು ಅಂತಾ ತಾಯಿ ಹೀಗ್ ಮಾಡೋದಾ..!?
ಕಾಲ ಬದಲಾದರೂ ನಮ್ಮ ಜನ ಮಾತ್ರ ಬದಲಾಗುತ್ತಿಲ್ಲ… ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಯಾದಗಿರಿ ರೈಲ್ವೆ ನಿಲ್ದಾಣದ ರೈಲ್ವೆ ಸೇತುವೆ ಕೆಳಭಾಗದಲ್ಲಿ ನಸುಕಿನ ಜಾವ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮಗು ಹೆತ್ತ ತಾಯಿಯ ಮಡಿಲನ್ನು ಸೇರಲು ಹಂಬಲಿಸಿ ಅಳುತ್ತಿತ್ತು..
ಮಗುವಿನ ಅಕ್ರಂದನ ಕೇಳಿದ ರೈಲ್ವೆ ಸುರಕ್ಷ ಬಲದ ಪೊಲೀಸ್ ಅಧಿಕಾರಿಗಳು ಕೂಡಲೇ ಮಗುವನ್ನು ರಕ್ಷಣೆ ಮಾಡಿದ್ದಾರೆ. ನಂತರ ಮಗುವನ್ನು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರ ಮಾಡಿದ್ದಾರೆ. ತಾಯಿಯ ಮಡಿಲಲ್ಲಿ ಇರಬೇಕಾದ ಹೆಣ್ಣು ಮಗು ಯಾಕೆ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. ಹೇಗೆ ಮಗು ಬಿಟ್ಟು ಪೋಷಕರು ಅನಾಥ ಮಾಡಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸ್ ಅಧಿಕಾರಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
Comments