ಪ್ರೇತಾತ್ಮಗಳ ಹಾವಳಿ ತಪ್ಪಿಸಲು ಹೋಮ ಮಾಡಲು ಮುಂದಾದ ಗ್ರಾಮಸ್ಥರು..!!

ನಮ್ಮಲ್ಲಿ ಇನ್ನೂ ಮೂಢನಂಬಿಕೆಗಳಿವೆ ಅನ್ನೋದಕ್ಕೆ ಕೆಲವೊಂದು ನಿದರ್ಶನಗಳು ಇರುತ್ತವೆ. ಈ ಕಾಲದಲ್ಲೂ ದೆವ್ವ, ಆತ್ಮ ಇವೆ ಅಂತಾ ಜನ ನಂಬುತ್ತಾರೆ. ಅದೇ ರೀತಿ ಇತ್ತೀಚೆಗೆ ನಡೆದ ಮಂಡ್ಯ ಬಸ್ ದುರಂತ ಉಂಟಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪ್ರೇತಾತ್ಮಗಳ ಹಾವಳಿ ಉಂಟಾಗಬಹುದೆಂಬ ಭಯದಿಂದ ಘಟನೆ ನಡೆದ ಸ್ಥಳದಲ್ಲಿ ಸಾಂಪ್ರಾದಾಯಿಕ ಆಚರಣೆ ನಡೆಸಲು ಗ್ರಾಮಸ್ಥರು ನಿರ್ದರಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕರಗನಮರಡಿ ಗ್ರಾಮದ ವಿಸಿ ನಾಲೆಗೆ ನವೆಂಬರ್ 24 ರಂದು ಖಾಸಗಿ ಬಸ್ ಬಿದ್ದು ಸುಮಾರು 30 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ದುರಂತದಲ್ಲಿ ಸತ್ತವರು ಆತ್ಮ ಪ್ರೇತಗಳಾಗಿ ಗ್ರಾಮಸ್ಥರಿಗೆ ಕಾಡಬಾರದು, ಅವರಿಗೆ ಮುಕ್ತಿ ನೀಡಬೇಕು ಎಂಬ ದೃಷ್ಟಿಯಿಂದ ಡಿಸೆಂಬರ್ 21 ರಂದು ಕನಗನಮರಡಿ ಮತ್ತು ವೇದ ಸಮುದ್ರ ಗ್ರಾಮದಲ್ಲಿ ಶಾಂತಿ ಹೋಮ -ಹವನ ಏರ್ಪಡಿಸಲಾಗಿದೆ. ವಿಶ್ವೇಶ್ವರಯ್ಯ ನಾಲೆಯ ಪಕ್ಕದಲ್ಲಿ ಈ ಆಚರಣೆಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ.
Comments