ಭ್ರಷ್ಟಾಚಾರಿಗಳ ವಿರುದ್ಧ ದೂರು ನೀಡಿದವರಿಗೆ ಎಸಿಬಿಯಿಂದ ಸನ್ಮಾನ
ಭ್ರಷ್ಟಚಾರ ಎನ್ನುವುದು ಇತ್ತಿಚಿಗೆ ಎಲ್ಲೆಡೆ ತಾಂಡವವಾಡುತ್ತಿದೆ.ಅದನ್ನು ತಡೆಗಟ್ಟುವುದು ನಮ್ಮಡಲ್ಲರ ಕರ್ತವ್ಯವಾಗಿರುತ್ತದೆ. ಭ್ರಷ್ಠ ಅಧಿಕಾರಿಗಳ ವಿರುದ್ಧ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಗೆ ದೂರು ನೀಡಿದ್ದ ಏಳು ಮಂದಿಯನ್ನು ಸಂಸ್ಥೆಯು ಭಾನುವಾರ ಸನ್ಮಾನಿಸಿದೆ. ಆರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಎಸಿಬಿ ಸನ್ಮಾನಿಸಿದ್ದು ಈ ವ್ಯಕ್ತಿಗಳು ದಾಖಲಿಸಿದ ದೂರಿನಿಂದ ಭ್ರಷ್ಟ ಅಧಿಕಾರಿಗಳನ್ನು ಬಂಧಿಸುವಲ್ಲಿ ಎಸಿಬಿ ಸಫಲವಾಗಿದ್ದು ಮಾತ್ರವಲ್ಲ ಇದರಿಂದ ಇನ್ನೂ ಹಲವು ಜನರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಿದೆ.
ಈ ಏಳು ದೂರುಗಳನ್ನು ನೀಡಿದವರನ್ನು ಹೀರೋಗಳು ಎಂದು ಕರೆದ ಬ್ಯೂರೋದ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿಪಿ) ಎಂ.ಚಂದ್ರಶೇಖರ್,. ಪ್ರತಿಯೊಬ್ಬರೂ ಒಂದಲ್ಲ ಒಂದು ರೂಪದಲ್ಲಿ ಭ್ರಷ್ಟಾಚಾರವನ್ನು ಎದುರುಗೊಂಡಿರುತ್ತಾರೆ. ಇದಕ್ಕೆ ನಾನೂ ಸಹ ಹೊರತಾಗಿಲ್ಲ. ನಾನು ಕಾಲೇಜಿನಲ್ಲಿದ್ದಾಗ ನನ್ನ ರೇಷನ್ ಕಾರ್ಡ್ ಪಡೆಯಲು ಲಂಚ ನೀಡಬೇಕಾಗಿತ್ತು. ನಾನಾಗ ಇದನ್ನು ವಿರೋಧಿಸಿರಲಿಲ್ಲ. ಬದಲು ನಾನು ಲಂಚದ ಹಣ ನಿಡಿದ್ದೆ.' ಎಂದಿದ್ದಾರೆ. ಲಂಚ ನೀಡುವುದನ್ನು ನಿಲ್ಲಿಸಿದಾಗಲೇ ಭ್ರಷ್ಟಚಾರ ಎನ್ನುವುದು ನಿಲ್ಲುವುದು.
Comments