ಗ್ರಾಹಕರಿಗೆ ಗುಡ್ ನ್ಯೂಸ್ : ಇಂದು ಸಹ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ..!!

ತೈಲ ಬೆಲೆ ಒಮ್ಮೆ ಹೆಚ್ಚು ಮತ್ತೊಮ್ಮೆ ಕಡಿಮೆ ಆಗುವುದರಿಂದ ಗ್ರಾಹಕರಿಗೆ ತುಂಬಾ ತಲೆ ನೋವಾಗುತ್ತಿತ್ತು.. ಆದರೆ ಕಡಿಮೆ ಆಗಿದ್ದಕ್ಕಿಂತ ಹೆಚ್ಚಾಗಿದ್ದೆ ಜಾಸ್ತಿ..ಕಳೆದ ಹಲವು ದಿನಗಳಂತೆ ಇಂದು ಸಹ ತೈಲ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ಖುಷಿಯಾಗಿದೆ.
ಬೆಂಗಳೂರಿನಲ್ಲಿ ಸೋಮವಾರದ ಪೆಟ್ರೋಲ್ ದರ ಲೀಟರ್‌ಗೆ 24 ಪೈಸೆ ಇಳಿಕೆಯಾಗಿ 70.90 ರೂ ಮತ್ತು ಡೀಸೆಲ್ ದರ 27 ಪೈಸೆ ಇಳಿಕೆಯಾಗಿ 65.20 ರೂ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 24 ಪೈಸೆ ಇಳಿಕೆಯಾಗಿ 70.37 ರೂ , ಮತ್ತು ಡೀಸೆಲ್ ದರ 27 ಪೈಸೆ ಇಳಿಕೆಯಾಗಿ 64.87 ರೂ ಇದೆ.ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್ ದರ 23 ಪೈಸೆ ಇಳಿಕೆಯಾಗಿ 75.95 ರೂ , 29 ಪೈಸೆ ಇಳಿಕೆಯಾಗಿ ಡೀಸೆಲ್ ಬೆಲೆ 67.86 ರೂ ಆಗಿದೆ.
Comments