ಈ ಆ್ಯಪ್ ಮೂಲಕ ಸಿಲಿಂಡರ್ ಗೆ ಹಣ ಪಾವತಿಸಿ ಲೀಟರ್ ಪೆಟ್ರೋಲ್ ಉಚಿತವಾಗಿ ಪಡೆಯಿರಿ..!!

ನೋಟ್ ಬ್ಯಾನ್ ಆದ ದಿನದಿಂದಲೂ ಕೂಡ ಇಲ್ಲಿಯವರೆಗೂ ಜನ ಸಾಮಾನ್ಯರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ.. ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಾನಾ ಕೊಡುಗೆಗಳನ್ನು ಘೋಷಿಸಿದೆ. ಇದೀಗ ಆ್ಯಪ್ ನಲ್ಲಿ ಸಿಲಿಂಡರ್ ಗೆ ಹಣ ಪಾವತಿಸಿದರೆ ಲೀಟರ್ ಪೆಟ್ರೋಲ್ ಉಚಿತ ಸಿಗಲಿದೆ ಎಂಬ ಹೊಸ ಕೊಡುಗೆ ನೀಡುತ್ತಿದ್ದಾರೆ..
ಆಧಾರ್ ಆಧಾರಿತ ಪೇಮೆಂಟ್ , ಆನ್‌ಲೈನ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್ ಸೇರಿದಂತೆ ಡಿಜಿಟಲ್ ವ್ಯವಸ್ಥೆಯಲ್ಲಿ ಹಣ ಪಾವತಿ ಮಾಡುವವರಿಗೆ ಪ್ರತಿ ಸಿಲಿಂಡರ್‌ಗೆ 5 ರೂ. ರಿಯಾಯಿತಿ ದೊರೆಯಲಿದೆ. ಸಂಸ್ಥೆ ರೂಪಿಸಿರುವ ' HP Re-Fuel ' ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಗ್ಯಾಸ್‌ಸಿಲಿಂಡರ್‌ನ ಬಿಲ್ ಪಾವತಿಸಿದಲ್ಲಿ ರಿವಾರ್ಡ್ ಪಾಯಿಂಟ್ ಸಿಗಲಿದ್ದು, ಎಚ್‌ಪಿ ಪೆಟ್ರೋಲ್ ಬಂಕ್‌ಗಳಲ್ಲಿ 1 ಲೀಟರ್ ವರೆಗೆ ಉಚಿತವಾಗಿ ಪೆಟ್ರೋಲ್ ಪಡೆಯಬಹುದಾಗಿದೆ. ಆದರೆ ಈ ಕೊಡುಗೆ ಡಿ. 31ರವರೆಗೆ ಮಾತ್ರಲಭ್ಯವಿದೆ ಎಂದು ಎಚ್‌ಪಿಸಿಎಲ್‌ನ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಅಂಬಾಭವಾನಿ ಕುಮಾರ್ ತಿಳಿಸಿದ್ದಾರೆ. ಈಗಲೇ ಈ ಆ್ಯಪ್ ಡೌನ್ ಲೋಡ್ ಮಾಡಿ ಪ್ರಯೋಜನ ಪಡೆದುಕೊಳ್ಳಿ.
Comments