ಮನೆ, ಕೈಗಾರಿಕೆ ಕಟ್ಟೋ ಪ್ಲ್ಯಾನ್ ಇದ್ಯಾ…!! ಹಾಗಾದ್ರೆ ರಾಜ್ಯ ಸರ್ಕಾರದಿಂದ ಸಿಕ್ತಿದೆ ಈ ಯೋಜನೆ..!!!

ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜನ ಸಾಮಾನ್ಯರಿಗೆ ನೀಡಿದೆ. ಅಷ್ಟೆ ಅಲ್ಲದೆ ಇದೀಗ ಮನೆ, ಕೈಗಾರಿಕೆ ಮಾಡೋರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದ್ದು, ಭೂಮಿ ಪರಿವರ್ತನೆ ಪ್ರಕ್ರಿಯೆ ಇನ್ನು ಮುಂದೆ ಆನ್ ಲೈನ್ ಮೂಲಕ ನಡೆಯಲಿದ್ದು, ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂ ಪರಿವರ್ತನೆ ಮಾಡುವುದು ಸರಳವಾಗಲಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಭೂ ಪರಿವರ್ತನೆಯನ್ನು ಸರಳಗೊಳಿಸಲು 1964 ರ ಭೂ ಕಂದಾಯ ಕಾಯಿದೆ ಸೆಕ್ಷನ್ 95 (2) ಕ್ಕೆ ತಿದ್ದುಪಡಿ ತರುವುದಕ್ಕೆ ಸಂಪುಟ ಈಗಾಗಲೇ ಒಪ್ಪಿಗೆಯನ್ನು ನೀಡಿದೆ. ಸಂಪುಟ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಇನ್ಮುಂದೆ ಭೂ ಪರಿವರ್ತನೆಗಾಗಿ ರೈತರು ನಾಡಕಚೇರಿ, ತಹಶೀಲ್ದಾರ್ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಎಲ್ಲವೂ ಕೂಡ ಒಂದೆ ಕಡೆ ಈ ಯೋಜನೆ ಪ್ರಕಾರ ನಡೆಯುತ್ತದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ.
Comments