ಸಾಲಮನ್ನಾ ಪ್ರಕ್ರಿಯೆಗೆ ಕೊನೆಗೂ ಸಿಕ್ಕಿತು ಚಾಲನೆ..! ಯಾರ ಯಾರ ಸಾಲ ಮನ್ನಾ ಆಗಲಿದೆ..!!!

04 Dec 2018 4:45 PM | General
405 Report

ಎಲ್ಲರಿಗೂ ಕೂಡ ಸಾಲ ಮನ್ನಾ ಯಾವಾಗ ಆಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದರು. ಇದೀಗ ಕುಮಾರಸ್ವಾಮಿಯವರು ಅದಕ್ಕೆ ತೆರೆ ಎಳೆದಿದ್ದಾರೆ.. ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಪ್ರಕ್ರಿಯೆ ಡಿಸೆಂಬರ್ 8 ರಂದು ಚಾಲನೆ ನೀಡಲಾಗುವುದು ಅಂತ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಘೋಷಣೆ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆಗೆ ಮಾತಾನಾಡಿದರು. ಇದೇ ವೇಳೆ ಅವರು ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಕ್ಕೆ ಸಂಬಂಧಪಟ್ಟಂತೆ ಮೊದಲ ಹಂತದ ಸಾಲಮನ್ನಾಗೆ ಡಿಸೆಂಬರ್ 8 ರಿಂದ ಚಾಲನೆ ನೀಡಲಾಗ್ತಿದೆ. ಪ್ರಾಯೋಗಿಕವಾಗಿ ದೊಡ್ಡಬಳ್ಳಾಪುರ ಹಾಗೂ ಸೇಡಂನಲ್ಲಿ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಅಂತ ತಿಳಿಸಿದರು. ಇನ್ನು ಮೊದಲ ಹಂತದಲ್ಲಿ 50 ಸಾವಿರ ಒಳಗಿನ ಸಾಲಮನ್ನಾವಾಗುತ್ತದೆ. ಈ ಪೈಕಿ 17 ಲಕ್ಷ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

Edited By

Manjula M

Reported By

Manjula M

Comments