ಡಿಸಿಎಂ "ಮಗ"ಳಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘನೆ..!
ಡಿಸಿಎಂ ಆದ ಪರಮೇಶ್ವರ್ 'ಮಗ'ಳಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿದ್ದರು ಕೂಡ ಪೋಲಿಸ್ ಇಲಾಖೆ ಗಪ್ ಚುಪ್ ಆಗಿದೆ ಎಂದು ಹೇಳಲಾಗುತ್ತಿದೆ.. ಡಿಸಿಎಂ 'ಮಗ'ಳು ಬೆಂಗಳೂರಿನ ರಸ್ತೆಗಳಲ್ಲಿ ನಿಯಮ ಮೀರಿ ವಾಹನ ಚಾಲನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ..
ಶಾನಾ ಅವರು ರೇಸಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಅದು ಅವರಿಗೆ ಫ್ಯಾಷನ್ ಹಾಗೂ ಹವ್ಯಾಸ ಕೂಡ ಆಗಿದೆ. ಇದೇ ಸಮಯದಲ್ಲಿ ಅವರು ತಮ್ಮ ರೇಸಿಂಗ್ ಕಾರನ್ನು ಬೆಂಗಳೂರಿನ ಎಲ್ಲಾ ಬೀದಿ ಬೀದಿಗಳಲ್ಲಿ ರೇಸಿಂಗ್ ರೀತಿಯಲ್ಲಿ ಚಲಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಟಿಯಲ್ಲಿ ಇಷ್ಟೆ ಪ್ರಮಾಣದಲ್ಲಿ ಮಾತ್ರ ಕಾರನ್ನು ಚಲಾವಣೆ ಮಾಡುವುದಕ್ಕೆ ಅವಕಾಶವಿರುತ್ತದೆ. ಆದರೆ ಅದನ್ನೂ ಮೀರಿ ಶಾನಾ ಅವರು ಕಾರನ್ನು ಚಲಾವಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ನಗರ ಪೋಲಿಸರು ಸುಮ್ಮನಿದ್ದಾರೆ ಎಂದು ಹೇಳಲಾಗುತ್ತಿದೆ.
Comments