ಪಬ್ ಜಿ ಗೇಮ್ ಆಡ್ತಾ ಇದ್ದೀರಾ..!? ಹಾಗಾದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್..!!

ಇತ್ತಿಚಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಕೂಡ ಆಂಡ್ರಾಯ್ಡ್ ಮೊಬೈಲ್ ಇದ್ದೆ ಇರುತ್ತದೆ… ಇದೀಗ ಪಬ್ ಜಿ ಗೇಮ್ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ನೀವು ಪಬ್ ಜಿ ಗೇಮ್ ಆಡ್ತಾ ಇದ್ದೀರಾ? ಹಾಗಾದ್ರೇ ನಿಮಗೆ ಇಲ್ಲಿದೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಎಸ್..ವಿಪರೀತವಾಗಿ ನೀವು ಪಬ್ ಜಿ ಗೇಮ್ ಆಡ್ತಾ ಇದ್ದರೆ ನೀವು ಮೆಂಟಲ್ ಆಸ್ಪತ್ರೆಗೆ ಸೇರುವುದು ಖಂಡಿತಾ…!
ಇನ್ನು ಪಬ್ ಜಿ ಗೇಮ್ ಕ್ರೇಜ್ ರಾಜಧಾನಿಯಲ್ಲಿ ಹೆಚ್ಚಾಗಿದೆ.. ಪ್ರತಿ ತಿಂಗಳು ನಿಮ್ಹಾನ್ಸ್ ಆಸ್ಪತ್ರೆಗೆ ಏನಿಲ್ಲಾ ಅಂದ್ರು ಸುಮಾರು 40 ಪಬ್ ಜಿ ಗೇಮ್‍ನಿಂದ ಮಾನಸಿಕ ಖಿನ್ನತೆಗೆ ಒಳಗಾದ ಕೇಸ್‍ಗಳು ದಾಖಲಾಗುತ್ತಿದೆ ಎಂದು ಹೇಳಲಾಗುತ್ತಿದೆ.. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೂ ಪಬ್ ಜಿ ಗೇಮ್ ಪ್ರಭಾವ ಬೀರುತ್ತಿದೆ. ಇದರಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ .. ಆದ್ದರಿಂದ ಮಕ್ಕಳನ್ನು ಇಂತಹ ಗೇಮ ಗಳಿಂದ ದೂರ ಇಡುವುದು ಒಳ್ಳೆಯದು..
Comments