ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಹೆಚ್ ಡಬ್ಲ್ಯೂ ಬುಷ್ ನಿಧನ..!
ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಹೆಚ್ ಡಬ್ಲ್ಯೂ ಬುಷ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಜಾರ್ಜ್ ಹೆಚ್ ಡಬ್ಲ್ಯೂ ಬುಷ್ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರು ಅಮೇರಿಕದ 41 ನೆಯ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು. ಜಾರ್ಜ್ ಬುಷ್ ಸೀನಿಯರ್ ಅಮೆರಿಕಾದ ಜೀವಂತವಿರುವ ಅತಿ ಹಿರಿಯ ಮಾಜಿ ಅಧ್ಯಕ್ಷರಾಗಿದ್ದರು, 2015 ರಲ್ಲಿ ಕತ್ತು ಮೂಳೆ ಮುರಿದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪಾರ್ಕಿನ್‍ಸನ್ ಸಮಸ್ಯೆಯನ್ನು ಎದುರುಸುತ್ತಿದ್ದರು ಎನ್ನಲಾಗಿದೆ. ವಯಸ್ಸಾಗಿದ್ದ ಕಾರಣ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
Comments