ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್: ಬಾಡಿಗೆ ಕೇಳಿದ್ದಕ್ಕೆ ಉರುಳಿತು ನಿರ್ಮಾಪಕನ ಹೆಣ
ಬೆಂಗಳೂರಿನಲ್ಲಿ ಯಾವಾಗಲೂ ತುಂಬ ಎಚ್ಚರದಿಂದ ಇರಬೇಕು… ಅದರಲ್ಲೂ ಮನೆ ಬಾಡಿಗೆ ಕೊಡುವಾಗ ಮಾತ್ರ ತುಂಬಾ ಮುಂಜಾಗ್ರತೆ ಹಾಗೂ ಎಚ್ಚರಿಕೆಯಿಂದ ಇರಬೇಕು. ಇದೀಗ ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಾನಿ ಚಿತ್ರದ ನಿರ್ಮಾಪಕರಾದ ರಮೇಶ್ ಜೈನ್ ಕೊಲೆಯಾದ ದುರ್ದೈವಿಯಾಗಿದ್ದಾರೆ. ರಮೇಶ್ ಜೈನ್ ಬ್ಯಾಟರಾಯನಪುರದ ಕವಿತಾ ಲೇಔಟ್ ನಲ್ಲಿರುವ ತಮ್ಮ ಮನೆಯ ಬಾಡಿಗೆ ಹಣವನ್ನು ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ಹೋಗಿದ್ದರು. ಈ ಮನೆಯಲ್ಲಿ ಬಾಡಿಗೆಯಿದ್ದ ನಸೀರ್ ಹಾಗೂ ಪಾಷ ಕಳೆದ 7 ವರ್ಷಗಳಿಂದ ಬಾಡಿಗೆಯನ್ನೇ ಕೊಡುತ್ತಿರಲಿಲ್ಲ. ಆಗ ಬಾಡಿಗೆ ವಿಚಾರದಲ್ಲಿ ಜಗಳವಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Comments