ಇನ್ಮುಂದೆ ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಸಿಗುತ್ತೆ ಉಚಿತ ಚಿಕಿತ್ಸೆ..!

ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಕೇಂದ್ರ ಸರ್ಕಾರದ ಅಯುಷ್ಮಾನ್ ಭಾರತ್ ಮತ್ತು ರಾಜ್ಯ ಸರ್ಕಾರದ ಅರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಕಾರ್ಡ್ ಇಲ್ಲದೇ ಇದ್ದರೂ ಸೂಕ್ತ ದಾಖಲೆ ನೀಡಿ ಬಿಪಿಎಲ್ ಕುಟುಂಬದವರು ಉಚಿತ ಚಿಕಿತ್ಸೆ ಪಡೆಯಬಹುದು.
ಸರ್ಕಾರ ಈಗಾಗಲೇ . ರಾಜ್ಯದ 385 ಸರ್ಕಾರಿ ಆಸ್ಪತ್ರೆ, 531 ಖಾಸಗಿ ಆಸ್ಪತ್ರೆ, ಸೇರಿ 916 ಜತೆಗೆ ನೆರೆ ರಾಜ್ಯಗಳ 36 ಆಸ್ಪತ್ರೆಗಳಲ್ಲೂ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು. ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 5 ಲಕ್ಷದವರೆಗೂ ಬಿಪಿಎಲ್ ಕಾರ್ಡ್ದಾರರು ಮತ್ತು ಬಡ ಕುಟುಂಬದವರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದರು. ಎಪಿಎಲ್ ಕುಟುಂಬದವರಿಗೆ ಶೇ.30ರಷ್ಟು ಗರಿಷ್ಠ ಒಂದೂವರೆ ಲಕ್ಷದವರೆಗೂ ಚಿಕಿತ್ಸಾ ವೆಚ್ಚವನ್ನು ನೀಡಲಿದೆ.
ನಿಮ್ಮ ಬಳಿ ಕಾರ್ಡ್ ಇಲ್ಲದೆ ಇದ್ದರು ಆಸ್ಪತ್ರೆಗೆ ದಾಖಲಾದ ನಂತರವೂ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಈ ಯೋಜನೆಯ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು.
Comments