ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ...!! ಅದು ಸಹಜ ಹೆರಿಗೆ..!!!
ಸಾಮಾನ್ಯವಾಗಿ ಒಂದು ಮಗುವಾದರೆ ಸಾಕು ಹೆಣ್ಣು ಮಕ್ಕಳು ಪಡುವ ನೋವು ಅಷ್ಟಿಷ್ಟಲ್ಲ.. ಅದರಲ್ಲೂ ಇತ್ತಿಚಿಗೆ ಹೆಚ್ಚು ಸಿಸೇರಿಯನ್ ಹೆಚ್ಚಾಗಿ ಬಿಟ್ಟಿದೆ.ಆದರೆ ಮಹಿಳೆಯೊಬ್ಬಳು ಹರಿಯಾಣದ ನ್ಯೂಹಾದಲ್ಲಿ ಒಂದೇ ಸಲ ಬರೋಬ್ಬರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ.. ಅಷ್ಟೆ ಅಲ್ಲದೆ ಇದು ಸಹಜ ಹೆರಿಗೆಯಾಗಿದ್ದು ವೈದ್ಯರು ಇದನ್ನು ಕಂಡು ಅಚ್ಚರಿಗೊಂಡಿದ್ದಾರೆ.
25 ವರ್ಷದ ಮಹಿಳೆ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ನಾರ್ಮಲ್ ಡೆಲಿವರಿಯಾಗಿರುವುದು ಆ ನಿಜಕ್ಕೂ ವೈದ್ಯರಲ್ಲಿ ಅಚ್ಚರಿಯನ್ನು ಮೂಡಿಸಿದೆ. ನಾಲ್ಕು ಮಕ್ಕಳು ಕೂಡ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಈ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದರೆ ಮತ್ತೊಂದು ಕಡೆ ಗ್ರಾಮದ ಜನರು ತಂಡ ತಂಡವಾಗಿ ಮನೆಗೆ ಬೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ..
Comments