ಅಕ್ಸಲೋಟ್ಲ್ ಅಲಿಯಾಸ್ ವಾಕಿಂಗ್ ಮೀನಿನ ಬಗ್ಗೆ ನಿಮಗೆಷ್ಟು ಗೊತ್ತು..!?
ಅಕ್ಸಲೋಟ್ಲ್... ಇದನ್ನು ಮೆಕ್ಸಿಕನ್ ವಾಕಿಂಗ್ ಮೀನು ಎಂದು ಸಹ ಕರೆಯುತ್ತಾರೆ. ಇದೊಂದು ಟೈಗರ್ ಸಲಾಮಾಂಡರ್ ವರ್ಗಕ್ಕೆ ಸೇರಿದೆ. ಇದನ್ನು ಆಡುಭಾಷೆಯಲ್ಲಿ ವಾಕಿಂಗ್ ಮೀನು ಎಂದು ಸಹ ಕರೆಯುತ್ತಾರೆ. ಆದರೆ ಇದು ಮೀನು ಅಲ್ಲ ಅನ್ನೋದು ಆಶ್ಚರ್ಯವಾದ ಸಂಗತಿ.ಇದೊಂದು ಉಭಯಚರ ಜಾತಿಗೆ ಸೇರಿದೆ. ಈ ಪ್ರಭೇಧವು ಹಲವಾರು ವರ್ಷಗಳಿಂದ ಕೆಲವೊಂದು ಸರೋವರಗಳಲ್ಲಿ ಮಾತ್ರ ಕಾಣಸಿಗುತ್ತಿದ್ದವು. ಆದರೆ ಮೆಕ್ಸಿಕೋ ನಗರದಲ್ಲಿ ಈ ವಾಕಿಂಗ್ ಮೀನು ಹೆಚ್ಚಾಗಿ ಕಾಣಸಿಗುತ್ತಿತ್ತು. ನೀರಿನಲ್ಲಿ ಉಭಯಚರಗಳು ಹೆಚ್ಚಾಗಿದ್ದು ಅಕ್ಸೊಲೊಟ್‍ಗಳು ಸರ್ವೆಸಾಮಾನ್ಯವಾಗಿದ್ದವು.
ಅಕ್ಸೊಲೊಟ್ಗಳು ಈಗಾಗಲೇ ಅಳಿವಿನ ಅಂಚಿನಲ್ಲಿದೆ. ಮೆಕ್ಸಿಕೋ ಕೂಡ ಇತ್ತಿಚಿಗೆ ನಗರೀಕರಣದ ವ್ಯವಸ್ಥೆಗೆ ಒಳಪಟ್ಟಿದ್ದು ಅಲ್ಲಿಯೂ ಕೂಡ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಯತ್ತೇಚ್ಚವಾಗಿ ಆಗುತ್ತಿದೆ. ಇದರಿಂದ ಅಕ್ಸೊಲೊಟ್ಗಳ ಪ್ರಾಣಕ್ಕೆ ಸಂಚಕಾರ ಬಂದಿದೆ ಎನ್ನಬಹುದು. ಈ ಮೀನನ್ನು ಮೆಕ್ಸಿಕನ್ ಮಾರುಕಟ್ಟೆಗಳಲ್ಲಿ ಆಹಾರವಾಗಿ ಮಾರಾಟ ಮಾಡುತ್ತಿದ್ದರು.ಕೆಲವು ವರ್ಷಗಳ ಹಿಂದೆ ಈ ಅಕ್ಸೊಲೊಟ್ಗಳ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಯಿತು. ಈ ಸಮೀಕ್ಷೆಯ ಪ್ರಕಾರ ಈಗಾಗಲೇ ಇದು ಅಳಿವಿನ ಅಂಚಿನಲ್ಲಿದೆ ಎಂಬುದು ಸಾಬೀತಾಗಿದೆ. ಮೆಕ್ಸಿಕೋ ನಗರದ ಕಾಲಕ್ರಮೇಣ ಬದಲಾದಂತೆ ಎಲ್ಲವೂ ಕೂಡ ಬದಲಾಗುತ್ತಿತ್ತು. ಅದರಲ್ಲಿ ಈ ಮೀನುಗಳು ಕೂಡ ಒಂದು ಎಂದು ಹೇಳಬಹುದು. ವಿಜ್ಞಾನಿಗಳು ಸುದೀರ್ಘವಾಗಿ ಸಂಶೋದನೆ ಮಾಡಿದ ಬಳಿಕ ಕೆಲವೊಂದು ಪ್ರದೇಶದಲ್ಲಿ ಇವು ಬೆಳಕಿಗೆ ಬಂದಿವೆ.ಈ ಅಕ್ಸೊಲೊಟ್ಗಳು 15 ರಿಂದ 45 ಸೆಂ.ಮೀ ಉದ್ದವಾಗಿ ಬೆಳೆಯುತ್ತವೆ. ಕೆಲವೊಂದು ಅಕ್ಸೊಲೊಟ್ 23 ಸೆಂ.ಮೀಗಳು ಬೆಳೆಯುತ್ತವೆ. ಇವುಗಳು ವಿಶಿಷ್ಟವಾದ ಲಕ್ಷಣಗಳನ್ನು ಹೊಂದಿದೆ. ಬಾಹ್ಯವಾದ ಕಿವಿರುಗಳು ಮತ್ತು ತಲೆಯ ಹಿಂಭಾಗದಿಂದ ಹಿಡಿದು ಒಂದು ಕಾಡಲ್ ಫಿನ್ಅನ್ನು ಹೊಂದಿದೆ. ಅದರ ತಲೆಗಳು ತುಂಬಾ ವಿಶಾಲವಾಗಿದೆ. ಅದರ ಕಣ್ಣುಗಳು ಚಿಕ್ಕದಾಗಿರುತ್ತವೆ. ನೋಡಲು ಪುಟ್ಟ ಮಗುವಿನಂತೆ ಇರುತ್ತವೆ. ಇದು ತನ್ನ ದೇಹದ ಮೇಲೆ ಹಲ್ಲುಗಳನ್ನು ಹೊಂದಿರುತ್ತದೆ. ಇದು ಕಿವಿಗಳ ಮುಖಾಂತರ ಉಸಿರಾಟವನ್ನು ನಡೆಸುತ್ತದೆ.ಅಕ್ಸೊಲೊಟ್ಗಳು ನಾಲ್ಕು ವರ್ಣದ ಜೀನ್ಗಳನ್ನು ಹೊಂದಿರುತ್ತದೆ. ಬಣ್ಣದ ರೂಪಾಂತರಗಳನ್ನು ರಚಿಸುತ್ತಾರೆ. ಸಾಮಾನ್ಯವಾಗಿ ಇವು ಕಂದು ಅಥವಾ ಚಿನ್ನದ ಬಣ್ಣವನ್ನು ಹೊಂದಿರುತ್ತದೆ. ಕೆಲವೊಂದು ಅಕ್ಸೊಲೊಟ್ಗಳು ತೆಳು ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಇದರ ಹುಟ್ಟು ಶುರುವಾಗಿದ್ದು ಮೆಕ್ಸಿಕೋದ ಝೆಚಿಮಿಲ್ಕೋ ಲೇಕ್ ಎನ್ನುವ ಪ್ರದೇಶದಲ್ಲಿ ಕಂಡುಬಂದಿತು. ಮೆಕ್ಸಿಕೋ ನಗರದ ಬೆಳವಣಿಗೆಯಿಂದ ಈಗ ಅಕ್ಸೊಲೊಟ್ಗಳು ಅಳಿವಿನ ಅಂಚಿನಲ್ಲಿದೆ. ಅಕ್ಸಲೋಟ್ಸ್ ಕೆಲವೊಮ್ಮೆ ಅಪಾಯಕಾರಿ ಅನಿಸುತ್ತದೆ. ಇದು ಯಾವಾಗಲೂ ನೀರಿನಲ್ಲಿಯೇ ಇರುತ್ತದೆ.
Comments