ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ: ಸುಜನ್ ಯೋಜನೆಗೆ ಅರ್ಜಿ ಸಲ್ಲಿಸಿ, 10 ಲಕ್ಷ ಸಾಲ ಪಡೆಯಿರಿ..!

ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೊಟ್ಟಿದೆ. ಈ ಯೋಜನೆಗಳ ಸದುಪಯೋಗವನ್ನು ಸಾಕಷ್ಟು ಜನ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಅದೇ ಸ್ವಯಂ ಉದ್ಯೋಗ ನಿರ್ಮಾಣಕ್ಕಾಗಿ ರೂಪಿಸುತ್ತಿರುವ ಸುಜನ್ ಯೋಜನೆ... ಇದು ನಿರುದ್ಯೋಗಿ ಯುವಕರಿಗೆ ಈ ಯೋಜನೆಯಿಂದ ಕೆಲಸ ಸಿಗುವಂತಾಗುತ್ತದೆ.
ಸುಜನ್ ಯೋಜನೆಯ ಅಡಿಯಲ್ಲಿ ಸುಮಾರು ರೂ. 10 ಲಕ್ಷದವರೆಗೆ ಸಾಲ ನೀಡಲಾಗುವುದು. ಇಲ್ಲಿ ಎಲ್ಲಾ ವರ್ಗದವರು ಸ್ವಂತ ಉದ್ಯೋಗ ಅಥವಾ ಸಣ್ಣ ಕೈಗಾರಿಕೆ ಪ್ರಾರಂಭಿಸಲು ಸುಜನ್ ಯೋಜನೆಯಡಿಯಲ್ಲಿ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ರೂ. 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಈ ಯೋಜನೆಯ ಮಾಹಿತಿಯನ್ನು ಪಡೆಯಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ, ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 13 ಕೊನೆಯ ದಿನಾಂಕವಾಗಿರುತ್ತದೆ. 8 ನೇ ತರಗತಿ ಪಾಸಾಗಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಸುಜನ್ ಯೋಜನೆಗೆ ಅರ್ಹತೆ -
ಕರ್ನಾಟಕ ರಾಜ್ಯದವರಿಗೆ ಮಾತ್ರ
ಎಲ್ಲಾ ವರ್ಗದವರು ಅರ್ಜಿ ಸಲ್ಲಿಸಬಹುದು.
ಕಾರ್ಡ್ ನ ಅವಶ್ಯಕತೆ ಇಲ್ಲ
ವಾರ್ಷಿಕ ಆದಾಯದ ಅಗತ್ಯವಿಲ್ಲ
8ನೇ ತರಗತಿ ಪಾಸಾಗಿರಬೇಕು.
ವಯಸ್ಸು 18 - 35ರ ಒಳಗಿರಬೇಕು
ವೆಬ್ಸೈಟ್ : https://cmegp.kar.nic.in/User/OnlineAppForm.aspx
Keywords: sujan yogana karnataka, how to apply, eligibility
Comments