ಇನ್ಮುಂದೆ ನೈಟಿ ಹಾಕ್ಕೊಂಡ್ರೆ 2000 ದಂಡ ಕಟ್ಬೇಕು ಹುಷಾರ್..!!
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅಂದರೆ ಒಂದು ಗೌರವೀಯ ಭಾವನೆ ಬರುತ್ತದೆ. ಅವರ ಉಡುಗೆ ತೊಡುಗೆ ಎಲ್ಲವನ್ನೂ ಕೂಡ ಭಾರತೀಯ ಸಂಸ್ಕೃತಿಗೆ ಬಹಳ ಹಿಂದೆ ಹೋಲಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಹೆಣ್ಣು ಮಕ್ಕಳು ಅವರಿಗೆ ಹೇಗೆ ಇಷ್ಟ ಬರುತ್ತೋ ಹಾಗೆ ಬಟ್ಟೆ ಹಾಕಿಕೊಳ್ಳಲು ಶುರುಮಾಡಿದ್ದಾರೆ. ಆದರೆ ಆಂಧ್ರದ ತೋಕಲಪಲ್ಲಿಯಲ್ಲಿ ಮಹಿಳೆಯರು ನೈಟಿಯನ್ನು ಧರಿಸುವಂತಿಲ್ಲ ಎಂಬ ಆದೇಶವನ್ನು ಹೊರಡಿಸಲಾಗಿದೆ.
ಆಂಧ್ರದ ಪಶ್ಚಿಮ ಗೋದಾವರಿಯ ನಿಡಮರ್ರು ಮಂಡಲದ ತೋಕಲಪಲ್ಲಿಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಮಹಿಳೆಯರು ಹಾಕಿಕೊಳ್ಳುವ ‘ನೈಟಿ’ ಯ ಮೇಲೆ ನಿಷೇಧವನ್ನು ಹೇರಲಾಗಿದೆ. ಇನ್ನು ಈ ಹಳ್ಳಿಯಲ್ಲಿ ಮಹಿಳೆಯರು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ನೈಟಿ ಧರಿಸಿಬಾರದು ಎಂದು ಗ್ರಾಮದ ಮುಖ್ಯಸ್ಥರು ಆದೇಶವನ್ನು ಹೊರಡಿಸಿದ್ದಾರೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ 2 ಸಾವಿರ ದಂಡವನ್ನು ವಿಧಿಸಲಾಗುವುದು ಎಂದೂ ಹೇಳಿದ್ದಾರಂತೆ. ಅಷ್ಟೆ ಅಲ್ಲ, ಮಹಿಳೆಯರು ‘ನೈಟಿ’ ಧರಿಸಿದ ಕುರಿತು ಯಾರಾದರೂ ದೂರು ನೀಡಿದರೆ, ಅವರಿಗೆ ಒಂದು ಸಾವಿರ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.ಆದರೆ ಆಶ್ಚರ್ಯದ ಸಂಗತಿ ಎಂದರೆ ಯಾವುದೇ ಮಹಿಳೆ ಈ ನಿರ್ಧಾರವನ್ನು ವಿರೋಧಿಸಲು ಮುಂದೆ ಬಂದಿಲ್ಲ. ಇದಲ್ಲದೆ ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಸಂಗ್ರಹಿಸಲಾದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಉಪಯೋಗಿಸಲಾಗುವುದು ಎಂದು ಗ್ರಾಮದ ಮುಖ್ಯಸ್ಥರು ಹೇಳಿದ್ದಾರೆ
Comments