ಈ ಚಿತ್ರದ ಹಿಂದಿನ ಕಥೆಯನ್ನು ಕೇಳಿದ್ರೆ ಶಾಕ್ ಆಗ್ತೀರಾ..!! ಕಣ್ಣಂಚಿನಲ್ಲಿ ನೀರು ತರಿಸುವ ಅಪ್ಪ ಮಗಳ ಕಥೆ..!!!

ಈ ಪೋಟೋವನ್ನು ನೋಡಿದ ತಕ್ಷಣ ಒಬ್ಬೊಬ್ಬರು ಒಂದೊಂದು ರೀತಿ ಥಿಂಕ್ ಮಾಡೋದು ಸಹಜ… ಹಲವಾರು ರೀತಿಯ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಮೂಡೋದಕ್ಕೆ ಶುರುವಾಗ್ತಾವೆ.. ಆದರೆ ಈ ಪೋಟೋವನ್ನು ಭಾವನಾತ್ಮಕವಾಗಿ ನೋಡಿ.. ಈ ಚಿತ್ರಕಲೆಯ ಹಿನ್ನಲೆಯನ್ನು ತಿಳಿದುಕೊಂಡರೆ ನಿಜಕ್ಕೂ ಹೆಣ್ಣು ಎಷ್ಟು ಕರುಣಾಮಯಿ ಅನ್ನೋದು ತಿಳಿಯುತ್ತೆ.. ಅದಕ್ಕೆ ಅನ್ಸುತ್ತೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಹೆಣ್ಣಿಗೆ ಪೂಜನೀಯ ಸ್ಥಾನ ಕೊಟ್ಟಿರುವುದು.. ಈ ಚಿತ್ರದ ಹಿಂದಿನ ಭಾವನೆಯನ್ನುತಿಳಿದುಕೊಳ್ಳಿ..
ಈ ಚಿತ್ರಪಟವನ್ನು ಬಿಡಿಸಿರೋದು ಯುರೋಪಿನ ಒಬ್ಬ ಪ್ರಖ್ಯಾತ ಕಲಾವಿದ. ಒಬ್ಬ ವ್ಯಕ್ತಿಗೆ ತಾನು ಮಾಡಿದಂತಹ ಯಾವೊದೋ ಒಂದು ತಪ್ಪಿಗೆ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುತ್ತಾನೆ . ಆ ಜೈಲಿನಲ್ಲಿ ಅವನಿಗೆ ಅನ್ನ ಅಥವಾ ನೀರು ಕೊಡದೆ ಚಿತ್ರಹಿಂಸೆ ನೀಡಲು ಶುರು ಮಾಡ್ತಾರೆ.. ಇಂತಹ ಸಂದರ್ಭದಲ್ಲಿ ಅವರ ಮಗಳು ಅಪ್ಪನನ್ನು ನೋಡಲು ಜೈಲಿಗೆ ಬರುತ್ತಾಳೆ. ಅವಳ ಅಪ್ಪ ಇರುವ ಪರಿಸ್ಥಿತಿಯನ್ನು ನೋಡಿ ನಿಜಕ್ಕೂ ಮಗಳಿಗೆ ಬೇಜಾರು ಮಾಡಿಕೊಳ್ಳುತ್ತಾಳೆ …ಆ ಸಂದರ್ಭದಲ್ಲಿ ಮಗಳೇ ನನಗೆ ಇಲ್ಲಿವರೆಗೂ ಊಟ ಕೊಟ್ಟಿಲ್ಲ ಹೊಟ್ಟೆ ಹಸಿವಿನಿಂದ ಸಾಯುತ್ತಿದ್ದೇನೆ ಅಂತ ತನ್ನ ಮಗಳ ಬಳಿ ಅಳಲನ್ನು ತೋಡಿಕೊಳ್ಳುತ್ತಾನೆ. ಆ ಸ್ಥಿತಿಯನ್ನು ನೋಡಿ ಮಗಳು ನೊಂದುಕೊಳ್ಳುತ್ತಾಳೆ , ಆಗ ಆಕೆ ತನ್ನ ಎದೆಯ ಹಾಲನ್ನು ತನ್ನ ಅಪ್ಪನಿಗೆ ಉಣಿಸಿತ್ತಾಳೆ. ತನ್ನ ಮಗು ಎಷ್ಟೇ ಹೊಟ್ಟೆ ಹಸಿದು ಕಿರುಚಿಕೊಂಡರೂ ಕೂಡ ತನ್ನ ತಂದೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಮಗಳು ಪ್ರತಿನಿತ್ಯ ಜೈಲಿಗೆ ಬಂದು ತಂದೆಗೆ ಹಾಲುಣಿಸಿ ಹೋಗುತ್ತಿರುತ್ತಾಳೆ.. .ಒಂದು ದಿನ ಅಲ್ಲಿನ ಅಧಿಕಾರಿಗೆ ಸಂಶಯ ಬಂದು ಎಷ್ಟು ದಿನ ಆದರೂ ಇವನು ಯಾಕೆ ಸಾಯಲಿಲ್ಲ ಎಂದು ಯೋಚನೆ ಮಾಡುತ್ತಾರೆ. ಒಂದು ದಿನ ಅವರ ಮಗಳು ಹಾಲು ಉಣಿಸುವ ಒಂದು ವಿಷಯ ತಿಳಿಯುತ್ತದೆ. ಈ ವಿಷಯವು ಕೋರ್ಟಿನ ಮೆಟ್ಟಿಲೇರಿ ಹಲವಾರು ಚರ್ಚೆಗೆ ಗುರಿಯಾಗುತ್ತದೆ. ಇದಾದ ನಂತರ ಸರ್ಕಾರ ಮಾನವೀಯತೆಯನ್ನು ಮೆರೆದು ಆತನನ್ನು ಬಿಡುಗಡೆ ಮಾಡುತ್ತದೆ.. ಪ್ರೀತಿ ವಾತ್ಸಲ್ಯ ಕರುಣೆ ಹೆಣ್ಣಿಗೆ ಮಾತ್ರ ಇರೋದಿಕ್ಕೆ ಸಾಧ್ಯ ಅನ್ನಿಸುತ್ತದೆ.
Comments