ಇನ್ಮುಂದೆ ಸಿಕ್ಕ, ಸಿಕ್ಕ ಕಡೆ ಕಸ ಹಾಕುದ್ರೆ ನಿಮ್ಮ ಮೇಲೆ ಕೇಸು ಬೀಳುತ್ತದೆ ಹುಷಾರ್…!

ಬಿಬಿಎಂಪಿಗೆ ದೊಡ್ಡ ತಲೆನೋವು ಅಂದರೆ ಅದು ಕಸದ ಸಮಸ್ಯೆ… ಎಲ್ಲಿ ಅಂದರಲ್ಲಿ ಕಸ ಹಾಕೋದು ಬೆಂಗಳೂರಿನಲ್ಲಿ ಕಾಮನ್ ಆಗಿಬಿಟ್ಟಿದೆ.. ಇನ್ನ ಮೇಲೆ ಸಿಕ್ಕ, ಸಿಕ್ಕ ಕಡೆ ಕಸ ಹಾಕುದ್ರೆ 'ನಿಮ್ಮ ಮೇಲೆ ಕೇಸು ಬೀಳುತ್ತದೆ ಹುಷಾರ್'! ಅಂತ 'ಹೈಕೋರ್ಟ್ ಮಹತ್ವ'ದ ಆದೇಶವನ್ನು ಹೊರಡಿಸಿದೆ.. ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ಇನ್ಮುಂದೆ ಕಸ ಹಾಕೋಕು ಮುನ್ನಾ ಯೋಚನೆ ಮಾಡಿ…
ಈ ಸಮಯದಲ್ಲಿ ಹೈಕೋರ್ಟ್ ಗೆ ಬಿಬಿಎಂಪಿ ವಕೀಲರ ನ್ಯಾಯಾಪೀಠದ ಮುಂದೆ ಬ್ಲಾಕ್ ಸ್ಪಾಟ್ ಸ್ಥಳ ಸ್ವಚ್ಚಗೊಳಿಸಿ ರಂಗೋಲಿ ಬಿಡಿಸಿದ್ದರೂ ಕೂಡ ಕಸ ಹಾಕಲಾಗುತ್ತಿದೆ. ಇದಲ್ಲದೇ ಹಿಂದಿನ ಎಲ್ಲ ಕಸವನ್ನು ವಿಲೇವಾರಿ ಮಾಡಿದ್ದೇವೆ. ಜನರು ಕೂಡ ಈ ಬಗ್ಗೆ ಗಮನ ಹರಿಸಬೇಕು, ಇಲ್ಲವಾದ್ರೇ ಸಮಸ್ಯೆ ಇನ್ನಷ್ಟು ಗಂಭಿರ ವಾಗುತ್ತದೆ ಅಂತ ಹೇಳಿದರು. ಇದೇ ವೇಳೆ ವಕೀಲರ ಉತ್ತರ ಕೇಳಿ ದಂಗಾದ ಸಿಜೆ ದಿನೇಶ್ ಕುಮಾರ್ ಅವರು ಬೀಟ್ ಪೊಲೀಸರು ಏನು ಮಾಡುತ್ತಿದ್ದಾರೆ.. ಅಂತ ಪ್ರಶ್ನೆ ಮಾಡಿದ್ದಾರೆ...ಪೌರಕಾಯ್ದೆಯ ಅನ್ವಯ ದಂಡ ವಿಧಿಸಿ ಕೇಸ್ ದಾಖಲಿಸಲು ಹೈಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿದರು.
Comments