ಬರೆದಿರುವ ನೋಟು ನಿಮ್ಮ ಬಳಿ ಇದ್ಯಾ..? ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ..!!

05 Nov 2018 1:57 PM | General
340 Report

ನೋಟುಗಳ ಮೇಲೆ ಏನಾದರೂ ಬರೆದಿದ್ದರೆ ಅಥವಾ ನೋಟು ಗಲೀಜಾಗಿದ್ದರೆ ಅದನ್ನು ಯಾರು ತೆಗೆದುಕೊಲ್ಲುವುದಿಲ್ಲ ಎಂಬುದು ಎಲ್ಲರಿಗೂ ಕೂಡ ತಿಳಿದೆ ಇದೆ.. ಒಂದು ವೇಳೆ ಇನ್ನುಮುಂದೆ ನಿಮ್ಮ ಬಳಿ ಇರುವ ನೋಟಿನಲ್ಲಿ ಏನೇನೋ ಬರೆದಿದ್ದರೆ ಅಥವಾ ಗಲಿಜಾಗಿದ್ದರೆ ಅದಕ್ಕಾಗಿ ಈ ನೋಟು ಕೆಲಸಕ್ಕೆ ಬಾರದು ಎಂದು ತಲೆ ಮೇಲೆ ಕೈ ಹೊತ್ತು ಚಿಂತಿಸುವ ಅವಶ್ಯಕತೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ..

ಕೊಳಕಾದ ಹಾಗೂ ಬರೆದ ನೋಟುಗಳನ್ನು ನಿಷ್ಪ್ರಯೋಜಕ ನೋಟುಗಳೆಂದು ಪರಿಗಣಿಸಬಾರದು ಎಂದು ರಿಸರ್ವ್ ಬ್ಯಾಂಕ್, ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ. ಆದಕಾರಣ ಈ ನೋಟುಗಳನ್ನು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಹಾಗೂ ಎಲ್ಲ ಬ್ಯಾಂಕ್ ಗಳು ಗಲಿಜಾದ ಹಾಗೂ ಬರೆದ ನೋಟುಗಳನ್ನು ಗ್ರಾಹಕರಿಂದ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ.. ಈ ಹಿಂದೆ 500 ಹಾಗೂ 2 ಸಾವಿರ ಮುಖ ಬೆಲೆಯ ನೋಟುಗಳು ಗಲಿಜಾಗಿದ್ದರೆ ಅಥವಾ ಅದರ ಮೇಲೆ ಬರೆದಿದ್ದರೆ ಬ್ಯಾಂಕ್ ಗಳು ಆ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ರಿಸರ್ವ್ ಬ್ಯಾಂಕ್ ಈ ಆದೇಶ ಹೊರಡಿಸಿದೆ. ಇನ್ನು ಮುಂದೆ ನೋಟುಗಳನ್ನು ಯಾವ ಬ್ಯಾಂಕ್ಗಳು ತೆಗೆದುಕೊಳ್ಳುವಂತಿಲ್ಲ ಎಂದು ಹೇಳುವಂತಿಲ್ಲ.

Edited By

Manjula M

Reported By

Manjula M

Comments