ಸಿಎಂ ಕುಮಾರಸ್ವಾಮಿಯವರ ಮೇಲಿನ #ME TOO ಆರೋಪದ ಬಗ್ಗೆ ರಾಧಿಕ ಏನ್ ಹೇಳುದ್ರು ಗೊತ್ತಾ..?

ಇತ್ತಿಚಿಗೆ ಸ್ಯಾಂಡಲ್ ವುಡ್’ನಲ್ಲಿ ಮೀಟೂ ಅಭಿಯಾನ ಸದ್ದು ಸಖತ್ತಾಗಿಯೇ ಕೇಳುತ್ತದೆ. ಕೇವಲ ಸಿನಿಮಾರಂಗಕ್ಕೆ ಅಷ್ಟೆ ಅಲ್ಲದೆ ರಾಜಕೀಯ ರಂಗಕ್ಕೂ ಕೂಡ ಇದರ ಬಿಸಿ ತಟ್ಟಿದೆ.. ಸಿಎಂ ಕುಮಾರಸ್ವಾಮಿ ಮತ್ತು ಕುಮಾರ್ ಬಂಗಾರಪ್ಪ ನಡುವಿನ ಮೀಟೂ ವಾಕ್ಸಮರಕ್ಕೆ ರಾಧಿಕಾ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಮೇಲೆ ಮಾಡಿರುವ ಮೀಟೂ ಆರೋಪಕ್ಕೆ ರಾಧಿಕ ಕುಮಾರಸ್ವಾಮಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ..
ಕುಮಾರ್ ಬಂಗಾರಪ್ಪ ಹೇಳಿಕೆ ಕುರಿತು ರಾಧಿಕಾ ಕುಮಾರಸ್ವಾಮಿ ಮೌನ ಮುರಿದಿದ್ದಾರೆ. ಭೈರವದೇವಿ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ರಾಧಿಕಾ ಕುಮಾರಸ್ವಾಮಿ ಪತ್ರಿಕೆಯೊಂದಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾಧಿಕ, `ಅಯ್ಯೋ ನನಗೆ ನನ್ ಕೆಲಸಗಳೇ ಸಾಕಷ್ಟಿದೆ. ಅದೆಲ್ಲ ಮಾತಾಡೋಕೆ ನಂಗೆ ಟೈಮಿಲ್ಲ. ಚುನಾವಣೆ ಸಂಬಂಧ ಮಾತನಾಡಿದ್ದು ಕುಮಾರಸ್ವಾಮಿ ಮತ್ತು ಕುಮಾರ್ ಬಂಗಾರಪ್ಪಗೆ ಸಂಬಂಧಪಟ್ಟ ವಿಷಯ. ಅದನ್ನು ಅವರಿಬ್ಬರೇ ಬಗೆಹರಿಸಿಕೊಳ್ತಾರೆ. ಈ ಬಗ್ಗೆ ನಾನ್ ಹೆಚ್ಚು ಮಾತಾಡಲ್ಲ. ನಾನು ಈ ಬಗ್ಗೆ ಸುಖಾಸುಮ್ಮನೆ ಮಧ್ಯೆ ಮಾತನಾಡಿ ಬಲಿಪಶು ಆಗೋದು ಇಷ್ಟವಿಲ್ಲ’ ಎಂದು ಹೇಳಿಕೆಯನ್ನು ನೀಡಿದ್ದಾರೆ.
Comments