‘ರಮ್ಯಾ ಹುಟ್ಟೇ ಹೇಗೆಂದು ಗೊತ್ತಿಲ್ಲ’ ಎಂದ ಮಾಜಿ ಸಚಿವ ಸೊಗಡು ಶಿವಣ್ಣ
ರಾಜಕೀಯದಲ್ಲಿ ಒಂದಲ್ಲಾ ಒಂದು ವಿಷಯಗಳು ಚರ್ಚೆಗೆ ಕಾರಣವಾಗುತ್ತಿರುತ್ತವೆ.. ನಿನ್ನೆ ಅಷ್ಟೆ ಪ್ರಧಾನಿಯವರನ್ನು ಮಾಜಿ ಸಂಸದೆ ರಮ್ಯ ಹಕ್ಕಿ ಪಿಕ್ಕಿಗೆ ಹೋಲಿಸಿ ಟ್ವೀಟ್ ಮಾಡಿದ್ದರು. ಆದರೆ ಇದೀಗ ಮಾಜಿ ಸಚಿವ ಸೊಗಡು ಶಿವಣ್ಣ ರಮ್ಯಾ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.‘ರಮ್ಯಾ ಹುಟ್ಟೇ ಹೇಗೆಂದು ಗೊತ್ತಿಲ್ಲ’ ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದಿದ್ದಾರೆ.
ನಿನ್ನೆ ಅಷ್ಟೆ ಪ್ರಧಾನಿ ನರೇಂದ್ರ ಮೋದಿಯನ್ನ ಹಕ್ಕಿಯ ಹಿಕ್ಕೆಗೆ ಹೋಲಿಸಿ ರಮ್ಯಾ ಟ್ವೀಟ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೇ ವಿಚಾರವಾಗಿ ನಗರದಲ್ಲಿ ಮಾತನಾಡಿದ ಶಿವಣ್ಣ ಮೋದಿಯವರು ಅಲ್ಲಿರುವ ಪ್ರತಿಮೆ ಪಕ್ಷದಲ್ಲಿ ನಿಂತಾಗ ಪುಟ್ಟದಾಗಿಯೇ ಕಾಣ್ತಾರೆ. ಪ್ರಧಾನಿಯವರ ಕೀರ್ತಿ ದೊಡದ್ದು, ಇದನ್ನು ಸಹಿಸದೇ ಲಘುವಾಗಿ ಮಾತನಾಡಿದ್ದಾರೆ. ರಮ್ಯಾ ಹುಟ್ಟೇ ಹೇಗೆಂದು ಗೊತ್ತಿಲ್ಲ. ಮಂಡ್ಯ ಜನರು ಅವರ ಹುಟ್ಟು ಸರಿ ಇಲ್ಲ ಅಂತ ಮಾತನಾಡ್ತಾರೆ. ರಮ್ಯಾ ಸಣ್ಣ ಮಕ್ಕಳ ಹಿಕ್ಕೆಗೂ ಸಾಟಿಯಿಲ್ಲ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
Comments