ಕಾರ್, ಬೈಕ್ ನಲ್ಲಿ ಬಂದು ಕಸ ಬಿಸಾಕೋರಿಗೆ ಬಿಗ್ ಶಾಕ್ .! ನಿಮ್ಮ ವಾಹನ ಜಾಪ್ತಿಯಾಗಬಹುದು ಹುಷಾರ್..!!
ಬೆಂಗಳೂರಿನಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ಕಸ ಎಲ್ಲಿ ಹಾಕುವುದು ಎಂಬುದೇ ದೊಡ್ಡ ಸಮಸ್ಯೆಯಾಗಿದೆ.. ರಾತ್ರಿಯ ವೇಳೆ ಕಸ ಎಲ್ಲೆಂದರಲ್ಲಿ ಹಾಕುವವರು, ಕಾರು, ಬೈಕ್‌ಗಳಲ್ಲಿ ಬಂದು ಕದ್ದು ಮುಚ್ಚಿ ರಸ್ತೆ ಬದಿ, ಖಾಲಿ ಜಾಗಗಳಲ್ಲಿ, ಚರಂಡಿಗಳಲ್ಲಿ ಕಸ ಎಸೆಯುವವರಿಗೆ ಬಿಗ್’ಶಾಕ್ ಕಾದಿದೆ. ಅದೇನೆಂದರೆ ನಿಮಗೆ ಶಿಕ್ಷೆ ದಂಡದ ಜೊತೆ, ನಿಮ್ಮ ವಾಹನ ಸಹ ಜಪ್ತಿಯಾಗಲಿದೆ. ಬಿಬಿಎಂಪಿಯು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸವನ್ನು ಬಿಸಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.. ದಂಡದ ಶಿಕ್ಷೆಗೆ ಗುರಿಪಡಿಸಲು ನಿವೃತ್ತ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ಬಿಬಿಎಂಪಿಯು ನೇಮಿಸಿಕೊಂಡಿದೆ.
ಪಾಲಿಕೆಯ ಪ್ರತಿ ಏರಿಯಾಕ್ಕೆ 3-4 ಮಂದಿಯಂತೆ ಒಟ್ಟು 8 ವಲಯಗಳಿಗೆ 32 ಮಾರ್ಷಲ್‌ಗಳನ್ನು ನಿಯೋಜನೆ ಮಾಡಿದೆ.. ಇವರು ರಾತ್ರಿ 10 ರಿಂದ ಮುಂಜಾನೆವರೆಗೆ ಗಸ್ತು ತಿರುಗುತ್ತಿದ್ದು, ಕಳೆದ ಕೆಲ ದಿನಗಳಿಂದ 100ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಕಸ ತುಂಬಿದ ಕವರ್‌ಗಳನ್ನು ಕಾರು, ಬೈಕ್‌ಗಳಲ್ಲಿ ಬರುವ ಸಾರ್ವಜನಿಕರು ಕಾಲುವೆ, ಖಾಲಿ ನಿವೇಶನ ಮತ್ತು ಚರಂಡಿಗಳಲ್ಲಿ ಬಿಸಾಡಿ ಹೋಗುವುದು ಸರ್ವೆ ಸಾಮಾನ್ಯವಾಗಿದೆ.. ಮಾಂಸದ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಹ ವ್ಯಾಪಾರ-ವಹಿವಾಟು ಮುಗಿದ ಬಳಿಕ ರಾತ್ರಿ ವೇಳೆ ತ್ಯಾಜ್ಯ ತುಂಬಿದ ಮೂಟೆಗಳನ್ನು ಎಸೆದು ಹೋಗುತ್ತಾರೆ.ಹಾಗಾಗಿ ಈ ರೀತಿಯ ಕಾರ್ಯಕ್ಕೆ ಮುಂದಾಗಿದೆ.
Comments