ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದ ಎಸ್.ಎಸ್.ಸಿ.: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉದ್ಯೋಗ ಇಲ್ಲದವರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಎಸ್.ಎಸ್.ಸಿ. ಸಂತಸದ ಸುದ್ದಿಯನ್ನು ನೀಡಿದೆ. ಟ್ರಾನ್ಸ್ ಲೇಟರ್ ಹುದ್ದೆ ಹಾಗೂ ಉಪನ್ಯಾಸಕರ ಹುದ್ದೆಗೆ ಎಸ್.ಎಸ್.ಸಿ. ಅರ್ಹ ಅಭ್ಯರ್ಥಿಯಿಂದ ಅರ್ಜಿ ಆಹ್ವಾನಿಸಲಾಗಿದೆ... ಅರ್ಜಿ ಸಲ್ಲಿಸಲು ನವೆಂಬರ್ 19 ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ಹೆಸರು : ಜ್ಯೂನಿಯರ್ ಟ್ರಾನ್ಸ್ ಲೇಟರ್, ಜ್ಯೂನಿಯರ್ ಹಿಂದಿ ಟ್ರಾನ್ಸ್ ಲೇಟರ್, ಹಿಂದಿ ಉಪನ್ಯಾಸಕ.
ಅರ್ಜಿ ಸಲ್ಲಿಸಲು ಕೊನೆ ದಿನ : ನವೆಂಬರ್ 19.
ವಿದ್ಯಾರ್ಹತೆ : ಪದವಿ ಅಥವಾ ಸ್ನಾತಕೋತ್ತರ ಪದವಿ. ವೆಬ್ ಸೈಟ್ ನಲ್ಲಿ ಜ್ಯೂನಿಯರ್ ಟ್ರಾನ್ಸ್ ಲೇಟರ್ ಮತ್ತು ಉಪನ್ಯಾಸಕರು ಯಾವ ಅರ್ಹತೆ ಹೊಂದಿರಬೇಕೆಂದು ತಿಳಿಸಲಾಗಿದೆ.
ವಯೋಮಿತಿ : ಜನವರಿ 1,2019 ರಂದು ಅರ್ಜಿದಾರನಿಗೆ 30 ವರ್ಷ ತುಂಬಿರಬೇಕು.ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ.
ಎಸ್.ಎಸ್.ಸಿ. ಯಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು.. ಅರ್ಜಿ ಸಲ್ಲಿಸಲು 100 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
Comments