ಕತ್ತಿನಲ್ಲಿರುವ ಚೈನಿಗೆ ಸೇಫ್ಟಿಪಿನ್ ಹಾಕಿಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ..!

ಕೆಲವರು ತಮ್ಮ ಕತ್ತಿನಲ್ಲಿರುವ ತಮ್ಮ ಚೈನಿಗೆ ಸೇಫ್ಟಿ ಪಿನ್ ಹಾಕಿಕೊಳ್ಳುವುದನ್ನ ರೂಢಿ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ಇದು ಒಳ್ಳೆಯದು ಅನಿಸಿದರು ಇದರಿಂದ ಅಪಾಯ ತಪ್ಪಿದ್ದಲ್ಲ. ಇದಕ್ಕೆ ನಿದರ್ಶನ ಎಂಬಂತೆ ಮುಂಬೈನಲ್ಲಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರದಲ್ಲಿ ಪಿನ್ ಹಾಕಿಕೊಂಡಿದ್ದಾರೆ. ಇದರಿಂದ ಮಗುವಿನ ಜೀವಕ್ಕೆ ಕುತ್ತು ಬಂದಿರುವ ಘಟನೆ ನಡೆದಿದೆ..
ಪುಟ್ಟ ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗ ಅವರು ಕತ್ತಿನಲ್ಲಿರುವ ಚೈನ್ ಅನ್ನು ಬಾಯಿಗೆ ಹಾಕಿಕೊಳ್ಳುವುದು ಕಾಮನ್ ಅಂತೆಯೇ ಇಲ್ಲಿ ಕೂಡ ಮಗುವನ್ನು ತಾಯಿ ಎತ್ತಿಕೊಂಡಾಗ, ಕರಿಮಣಿಯಲ್ಲಿದ್ದ ಪಿನ್ ಅನ್ನು ಮಗು ನುಂಗಿದೆ. ಈ ಪಿನ್ ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ. ಮಗು ಒಂದೆ ಸಮನೆ ಅಳುತ್ತಿರೋದನ್ನು ಗಮನಿಸಿದ ಪೋಷಕರು ಗಾಬರಿಯಾಗಿದ್ದಾರೆ. ವೈದ್ಯರು ಪರೀಕ್ಷೆ ಮಾಡಿದ ಮಗುವಿನ ಎಕ್ಸ್ ರೇ ತೆಗೆದಾಗ ಮಗುವಿನ ಕುತ್ತಿಗೆಯಲ್ಲಿ ಪಿನ್ ಸಿಲುಕಿರುವ ಬಗ್ಗೆ ತಿಳಿದುಬಂದಿದೆ.ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಗಂಟಲಲ್ಲಿ ಸಿಲುಕಿದ್ದ ಪಿನ್ ಹೊರತೆಗೆಯಲಾಗಿದೆ. ಹಾಗಾಗಿ ಮಕ್ಕಳನ್ನು ನೋಡಿಕೊಳ್ಳುವುವಾಗ ತುಂಬಾ ಜೋಪಾನದಿಂದ ನೋಡಿಕೊಳ್ಳಬೇಕು.
Comments