ಇದು ಸೇಮ್ ಕಾಗೆ ಥರಾನೇ.. ಆದರೆ ಕಾಗೆಯಲ್ಲ..! ಮತ್ತೇನಿದು ಅಂತಾ ಯೋಚನೆ ಮಾಡ್ತಿದ್ದೀರಾ..?

ಒಮ್ಮೆ ನೀವೆಲ್ಲಾ ಈ ಫೋಟೋವನ್ನ ಸರಿಯಾಗಿ ನೋಡ್ಬಿಡಿ.. ನೋಡುದ್ರಾ.. ಹಾ…. ಇದೆನಪ್ಪಾ ಕಾಗೇ ಫೋಟೋ ಹಾಕ್ ಬಿಟ್ಟು ನೋಡು ಅಂತಿದಿರಾ…. ಅಯ್ಯೋ ರೀ ಇದು ಕಾಗೆ ಅಲ್ಲ.. ಸರಿಯಾಗಿ ನೋಡ್ರಿ ಒಂದ್ಸಲ…? ಏನು ಅಂತಾ ಗೊತ್ತಾಗ್ತಿಲ್ವ.. ಅಲ್ಲೇ ಇರೋದು ನೋಡಿ ಟ್ವಿಸ್ಟ್. ಈ ಫೋಟೋದಲ್ಲಿರೋದು ನಿಜ ಹೇಳಬೇಕು ಅಂದ್ರೆ ಕಾಗೆನೇ ಅಲ್ಲ . ಅರೇ ಇದೇನಿದು ಇದು ಕಾಗೆ ಅಲ್ವಾ ಮತ್ತೆ ಇದೇನಿದು ಅಂತಾ ಯೋಚನೆ ಮಾಡುತ್ತಿದ್ದೀರಾ…? ಇದು ಕಾಗೆ ಹಾಗೆನೇ ಕಾಣೋ ಕಪ್ಪು ಬೆಕ್ಕು.ಶಾಕ್ ಆಯ್ತ ಮುಂದೆ ಓದಿ..!!
ಈ ಬೆಕ್ಕು ತನ್ನ ತಲೆಯನ್ನ ತಿರುಚಿ ಫೋಟೋಗೆ ಸಖತ್ತಾಗಿಯೇ ಪೋಸ್ ಕೊಟ್ಟಿದೆ. ಬೆಕ್ಕಿನ ಮುಖದ ಒಂದು ಭಾಗದ ಮೇಲೆ ಮಾತ್ರ ಬೆಳಕು ಬಿದ್ದಿದೆ. ಹೀಗಾಗಿ ಬೆಕ್ಕಿನ ಒಂದು ಕಣ್ಣು ಮಾತ್ರ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.. ಜೊತೆಗೆ ಬೆಕ್ಕಿನ ಎರಡು ಕಿವಿಗಳ ಪೈಕಿ ಒಂದು ಕಿವಿ ಕಂಡಿದ್ದು, ಅದು ನೋಡೋಕೆ ಸೇಮ್ ಕಾಗೇ ಕೊಕ್ಕಿನ ರೀತಿ ಕಾಣಿಸುತ್ತಿದೆ. ಹೀಗಾಗಿ ಈ ಬೆಕ್ಕು ಕಾಗೆಯಂತೆ ಕಾಣ್ತಿದೆ. ಈ ಫೋಟೋವನ್ನು ರಾಬರ್ಟ್ ಮ್ಯಾಕ್ಗುಯಿರ್ ಎಂಬುವವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. ಈ ಕಾಗೆಯ ಫೋಟೋ ಕುತೂಹಲಕಾರಿಯಾಗಿದೆ. ಆದ್ರೆ ಇದು ನಿಜಕ್ಕೂ ಕಾಗೆಯಲ್ಲ, ಬೆಕ್ಕು ಎಂದು ಸ್ವತಹ ಬರೆದುಕೊಂಡಿದ್ದಾರೆ.
This picture of a crow is interesting because...it's actually a cat pic.twitter.com/dWqdnSL4KD
— Robert Maguire (@RobertMaguire_) 28 October 2018
Comments