ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ : ಇನ್ಮುಂದೆ ಎಟಿಎಂನಿಂದ ಹಣ ತೆಗೆಯಲು ಬೇಕಿಲ್ಲ ಯಾವ ಕಾರ್ಡ್..!?
ನೋಟ್ ಬ್ಯಾನ್ ಆದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆದವು.. ಸಾಕಷ್ಟು ಜನ ಪರದಾಡುವಂತೆ ಆಯಿತು.. ಈ ಕಾರಣಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣದ ಯುಗ ಆರಂಭವಾಯಿತು ಎಂದರೆ ತಪ್ಪಿಲ್ಲ. ಹಾಗಾಗಿ ಒಂದು ಹೆಜ್ಜೆ ಮುಂದೆ ಇಟ್ಟು ಇದೀಗ ಎಟಿಎಂಗಳಿಗೂ ಕ್ಯೂ ಆರ್ ಕೋಡ್ ಅಳವಡಿಸಲು ಸಿದ್ದತೆಯನ್ನು ನಡೆಸಿದೆಯಂತೆ.ಇಷ್ಟು ದಿನ ಎಟಿಎಂಗಳಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಎಟಿಎಂ ಯಂತ್ರಗಳಲ್ಲಿ ಸ್ವೈಪ್ ಮಾಡಿ ಹಣ ತೆಗೆದುಕೊಳ್ಳಬೇಕಿತ್ತು. ಆದರೆ ಇದೀಗ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಬಿಡಿಸಿಕೊಳ್ಳುವ ತಂತ್ರಾಂಶ ಸಿದ್ದವಾಗಿದೆ.
ಯುಪಿಐ, ಪೇಟಿಯಂ ಸೇರಿದಂತೆ ಇ-ವ್ಯಾಲೆಟ್ ನಲ್ಲಿರುವ ಸೌಲಭ್ಯದಂತೆ ಬ್ಯಾಂಕ್ ಖಾತೆಗೂ ಇದನ್ನು ಮುಂದುವರಿಸಲು ಬ್ಯಾಂಕಿಂಗ್ ಕ್ಷೇತ್ರ ಸಿದ್ಧತೆಗಳನ್ನು ನಡೆಸಿದೆ. ಇದರೊಂದಿಗೆ ಈ ಸ್ಕ್ಯಾನ್ ಬಳಸಿ ಹಣ ಬಿಡಿಸುವಾಗ, 100, 500 ಹಾಗೂ 2000 ನೋಟುಗಳಲ್ಲಿ ಯಾವ ನೋಟುಗಳು ಬೇಕು ಎಂದು ಆಯ್ಕೆ ಮಾಡಬಹುದಾಗಿದೆ ಎನ್ನಲಾಗಿದೆ. ಹಣ ತೆಗೆದುಕೊಳ್ಳುವುದರ ಜೊತೆಗೆ ಡಿಡಿ ಪಡೆಯುವುದಕ್ಕೂ ಹೊಸ ತಂತ್ರಜ್ಞಾನದಲ್ಲಿ ಅವಕಾಶ ನೀಡಲಾಗುತ್ತೆ ಎಂದು ಹೇಳಲಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಕ್ಯೂಆರ್ ಕೋಡ್ ಜತೆ ಬಯೋಮೆಟ್ರಿಕ್ ಅಥವಾ ಫಿಂಗರ್ ಪ್ರಿಂಟ್ ಸ್ಕ್ಯಾನ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನುಮುಂದೆ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.
Comments