ನವೆಂಬರ್ ಪ್ರಾರಂಭದಲ್ಲಿ ರಾಜ್ಯಕ್ಕೆ ಹಿಂಗಾರು ಮಳೆ : ರೈತರ ಮೊಗದಲ್ಲಿ ಸಂತಸ

ಈ ಬಾರಿ ನವೆಂಬರ್ ಆರಂಭದಿಂದ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಲಿದೆ ಎಂದು ಹೇಳಲಾಗಿದ್ದು ಈ ಬಗ್ಗೆ ಮಾಧ್ಯಮಗಳಿಗೆ ಹವಾಮಾನ ಇಲಾಖೆ ಹೇಳಿದೆ.ಶ್ರೀಲಂಕಾ ಹತ್ತಿರ ಬಂಗಾಳಕೊಲ್ಲಿಯಲ್ಲಿ ಹಿಂಗಾರು ಸುಳಿಗಾಳಿ ವಾತಾವರಣ ಸೃಷ್ಟಿಯಾಗಿದ್ದು, ಹಾಗಾಗಿ ಮುಂದಿನ ಐದಾರು ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರುತ್ತದೆ. ನವೆಂಬರ್ ಆರಂಭದಿಂದಲೇ ಮಳೆಯಾಗಲಿದೆ ಎಂದಿದ್ದಾರೆ.
ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅ.31ರವರೆಗೂ ಒಣಹವೆ ವಾತಾವರಣವಿರಲಿದ್ದು, ಈ ಹಿಂದೆ ಅ.8 ಕ್ಕೆ ವಾಡಿಕೆಗಿಂತ ಮುನ್ನವೇ ಹಿಂಗಾರು ಪ್ರವೇಶಿಸುವ ಮುನ್ಸೂಚನೆ ದೊರಕಿತ್ತು. ಆದರೆ ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದಿಂದ ಅನುಕೂಲಕರ ವಾತಾವರಣ ಬಾರದೆ ಹಿಂಗಾರು ಆಗಮನದ ದಿನ ಮುಂದಕ್ಕೆ ಹೋಗಿತ್ತು. ಈಗ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ನವೆಂಬರ್ ಆರಂಭದಿಂದ ರಾಜ್ಯದಲ್ಲಿ ಮಳೆಯಾಗಲಿದೆಯಂತೆ. ಒಳ್ಳೆಯ ಮಳೆಯಾದರೆ ರೈತರಿಗೂ ಕೂಡ ಖುಷಿಯಾಗುತ್ತದೆ.
Comments