ಸರ್ಕಾರಿ ಬಸ್ ಚಲಿಸುತ್ತಿದ್ದಾಗಲೇ ಕಳಚಿಕೊಂಡ ಟೈರ್..! ಪ್ರಯಾಣಿಕರು ಪ್ರಾಣಪಾಯದಿಂದ ಪಾರು

ಬಸ್ ಗಳು ಚಲಿಸುತ್ತಿದ್ದಾಗ ಅಪಘಾತಗಳು ಆಗೋದು ಕಾಮನ್. ಆದರೆ ಚಲಿಸುತ್ತಿದ್ದ ಬಸ್ನ ಟೈರ್ ಕಳಚಿ ಬಿದ್ದು ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಭೂತನಕಾಡು ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಟೈರ್ ಇದ್ದಕ್ಕಿದ್ದ ಹಾಗೆ ಕಳಚಿದೆ.
ಆ ಸಮಯದಲ್ಲಿ ಬಸ್ನ ನಿಯಂತ್ರಣ ತಪ್ಪಿದ್ದು ಸ್ವಲ್ವ ದೂರ ಚಲಿಸುತ್ತಿದ್ದಂತೆಯೇ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾನೆ. ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದ್ದು ಬಸ್ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಗಾಯಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Comments