ರಾಜ್ಯಸರ್ಕಾರದಿಂದ ನಿಮಗೆ ಸಿಗಲಿದೆ 10 ಲಕ್ಷ ರೂ..! ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೆ..!!

ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮತ್ತೊಂದು ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ, ಇದು ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಮಹತ್ವದ ಯೋಜನೆಯಾಗಿದ್ದು, ನಿರುದ್ಯೋಗಿ ಯುವಕ ಹಾಗು ಯುವತಿಯರಿಗೆ ಒಂದೊಳ್ಳೆ ಅವಕಾಶವನ್ನ ರಾಜ್ಯ ಸರ್ಕಾರ ನೀಡುತ್ತಿದೆ. ಸ್ವಂತ ಉದ್ಯೋಗಕ್ಕಾಗಿ 10 ಲಕ್ಷ ರೂಪಾಯಿಯನ್ನ ರಾಜ್ಯ ಸರ್ಕಾರವು ನೀಡುತ್ತಿದೆ. ಈ ಯೋಜನೆಯ ಸದುಪಯೋಗ ಪಡೆಯಲು apl ಅಥವಾ bpl ಕಾರ್ಡ್ ಸೀಮಿತವಾಗಿಲ್ಲ ಹೊರತಾಗಿ ಈ ಯೋಜನೆಯನ್ನ ಎಲ್ಲಾ ಯುವಕ ಯುವತಿಯರು ಪಡೆಯಬಹುದಾಗಿರುತ್ತದೆ.
ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ರೂಪಿಸಿರುವ ಈ ಯೋಜನೆಯ ಹೆಸರು ಮುಖ್ಯ ಮಂತ್ರಿ ಸುಜನ್ ಯೋಜನೆ, ಈ ಸುಜನೆಯಲ್ಲಿ ಯುವಕ ಯುವತಿಯರಿಗೆ ಸಣ್ಣ ಕೈಗಾರಿಕೆಗಳನ್ನ ಆರಂಭಿಸಲು ಬ್ಯಾಂಕ್ ಗಳಲ್ಲಿ 10 ಲಕ್ಷ ರೂಪಾಯಿ ಸಾಲವನ್ನ ನೀಡಲಾಗುತ್ತಿದೆ. ಈ ಯೋಜನೆಯನ್ನ ಪಡೆಯಲು ನೀವು 8 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಾಮಾನ್ಯ ವರ್ಗದವರ ವಯಸ್ಸು 18 ರಿಂದ 35 ರ ಒಳಗೆ ಇರಬೇಕು. ಈ ಯೋಜನೆಯನ್ನ ಪಡೆಯಲು ಆಸಕ್ತಿ ಇದ್ದವರು ನವೆಂಬರ್ 13 ರ ಒಳಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ, ರಾಜ್ಯ ಸರ್ಕಾರದ ಈ ಯೋಜನೆಯಿಂದ ನಿರೋದ್ಯೋಗಿ ಯುವಕ ಯುವತಿಯರಿಗೆ ಅನುಕೂಲವಾಗುತ್ತದೆ. ಹಾಗಾಗಿ ಸರ್ಕಾರದ ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಿ.
Comments