ಪೊಲೀಸರಿಗೆ ಸಿಕ್ತು "ದೀಪಾವಳಿ ಬಂಪರ್ ಗಿಫ್ಟ್": ಅವಘಡಗಳಲ್ಲಿ ಸಾವನ್ನಪ್ಪಿದವರಿಗೆ ಸಿಗಲಿದೆ 30 ಲಕ್ಷ ರೂ. ಪರಿಹಾರ..!

ಕೆಲವೊಮ್ಮೆ ಕಾನೂನು ಸುವ್ಯವಸ್ಥೆ ಕಾಪಾಡುವಾಗ ಅಥವಾ ಅಪರಾಧಗಳನ್ನು ತಡೆಗಟ್ಟುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಮೃತಪಟ್ಟರೆ ಪೊಲೀಸರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 30 ಲಕ್ಷ ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ. ಪೊಲೀಸ್ ಸಿಬ್ಬಂದಿ ಒಂದು ವೇಳೆ ಆ ಕುಟುಂಬವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರೂ ಯೋಚಿಸಬೇಕಾದ ವಿಷಯವೇ.. ಇದೆ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿರುವುದು ಖುಷಿಯ ವಿಚಾರವೇ..
ರಾಜ್ಯ ಸರಕಾರದ ಹೊಸ ಆದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳ ತಡೆಗಟ್ಟುವಾಗ ಪೊಲೀಸ್ ಸಿಬ್ಬಂದಿ ಮೃತಪಟ್ಟರೆ 30 ಲಕ್ಷ ರೂ. ಹಾಗೂ ಶಾಶ್ವತ ಅಂಗವಿಕಲತೆಗೊಂಡರೆ 10 ಲಕ್ಷ ರೂ. ಮತ್ತು ಗಂಭೀರ ಸ್ವರೂಪದ ಗಾಯವಾದರೆ 2 ಲಕ್ಷ ರೂ. ಪರಿಹಾರ ನೀಡಲು ಈಗಾಗಲೇ ಸರ್ಕಾರ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. 1983ರಲ್ಲಿ ಹೊರಡಿಸಿದ್ದ ಆದೇಶದಂತೆ ಪೊಲೀಸರು ಕರ್ತವ್ಯದ ವೇಳೆ ಮೃತಪಟ್ಟಾಗ ಅಥವಾ ಗಾಯಗೊಂಡಾಗ ನೀಡುತ್ತಿದ್ದ ಪರಿಹಾರ ಕಡಿಮೆ ಇತ್ತು , ಹೀಗಾಗಿ ಈ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡುವುದಕ್ಕೆ ಸರಕಾರಕ್ಕೆ ಮನವಿಯನ್ನು ಪೋಲಿಸ್ ಇಲಾಖೆ ಮಾಡಿದೆ, ಇಲಾಖೆಯ ಮನವಿಯನ್ನು ಪರಿಗಣಿಸಿರುವ ಸರಕಾರ ಒಪ್ಪಿಗೆ ನೀಡಿಪರಿಷ್ಕೃತ ಆದೇಶ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.
Comments