ಫಳ ಫಳನೇ ಹೊಳೆದ ನಾಗರಹಾವಿನ ಹೆಡೆ : ಫೋಟೋ ವೈರಲ್
ನಾಗರ ಹಾವನ್ನು ಕಂಡರೆ ಭಯ ಪಡೊರೆ ಜಾಸ್ತಿ.. ನಾಗರಹಾವುನಲ್ಲಿಯೂ ಕೂಡ ಬೇರೆ ಬೇರೆ ವಿಧಗಳು ಇರುತ್ತವೆ.. ಆದರೆ ನಾಗರಹಾವಿನ ಎಡೆ ಹೊಳೆಯುವುದನ್ನು ಎಲ್ಲಾದರೂ ನೋಡಿದಿರ.. ಸೂರ್ಯನ ಬೆಳಕು ನಾಗರ ಹಾವಿನ ಹೆಡೆ ಮೇಲೆ ಬಿದ್ದಿದ್ದು ಆ ನಾಗರಹಾವು ವಿಶಿಷ್ಟವಾಗಿ ಕಂಡಿದೆ.. ಹಾಗಾಗಿ ಆ ಹಾವಿನ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.. ಸದ್ಯಕ್ಕೆ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಗರಹಾವಿನ ಹೆಡೆ ಈ ರೀತಿ ವಿಭಿನ್ನವಾಗಿ ಕಂಡಿದೆ, ಅವಿನಾಶ್ ಎಂಬುವವರ ತೋಟದಲ್ಲಿ ಮಂಗಳವಾರ ಈ ನಾಗರ ಹಾವು ಕಾಣಿಸಿಕೊಂಡಿದೆ. ತೋಟಕ್ಕೆ ನುಗ್ಗಿದ ಹಾವನ್ನು ಕಂಡು ಅವಿನಾಶ್ ಅವರ ಸಾಕು ನಾಯಿ ಜೋರಾಗಿ ಬೊಗಳಲು ಪ್ರಾರಂಭಮಾಡಿದೆ. ಆಗ ತಕ್ಷಣ ಎಚ್ಚೆತ್ತ ಮನೆಯವರು ತೋಟದ ಬಳಿ ಬಂದು ನೋಡಿದಾಗ ನಾಗರಹಾವು ಕಾಣಿಸಿಕೊಂಡಿದೆ. ನಾಗರಹಾವಿನ ಹೆಡೆ ವಿಭಿನ್ನವಾಗಿ ಗೋಚರಿಸುತ್ತಿದ್ದು, ಸೂರ್ಯನ ಕಿರಣಕ್ಕೆ ಕೆಂಪಾಗಿ ಫಳ ಫಳನೆ ಹೊಳೆಯುತ್ತಿತ್ತು, ಇದನ್ನು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.. ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Comments