ಪಟಾಕಿ ಹೊಡೆಯಲು ಟೈಮ್ ಫಿಕ್ಸ್ ಮಾಡಿದ ಸುಪ್ರಿಂ ಕೋರ್ಟ್..! ಹಾಗಾದ್ರೆ ಪಟಾಕಿಯನ್ನು ಯಾವಾಗ ಹೊಡೆಯಬೇಕು..!?

ಹಿಂದೂ ಹಬ್ಬಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು.. ದೀಪಾವಳಿ ಹಬ್ಬ ಅಂದರೆ ತುಂಬಾ ಖುಷಿ ಪಡುತ್ತಾರೆ. ಏಕೆಂದರೆ ದೀಪಾವಳಿ ಹಬ್ಬ ಎಂದರೆ ದೀಪಗಳ ಹಬ್ಬ . ಅದು ಬೆಳಕಿನ ಹಬ್ಬ.. ಆ ದಿನದಂದು ಮನೆಯ ಒಳಗೂ ಮತ್ತು ಹೊರಗು ದೀಪಗಳನ್ನು ಹಚ್ಚಿ ಸಂಭ್ರಮ ಪಡ್ತಾರೆ. ಅದರಲ್ಲು ಸಂಜೆ ಆಗೋದನ್ನೆ ಕಾಯ್ತ ಇರ್ತಾರೆ.. ಯಾಕಂದ್ರೆ ಪಟಾಕಿ ಹೊಡೆದ್ರೆ ತಾನೇ ದೀಪಾವಳಿ ಹಬ್ಬಕ್ಕೆ ಕಳೆ ಬರೋದು.. ಅದಕ್ಕೆ ಎಲ್ಲರೂ ಸೇರಿ ಪಟಾಕಿ ಹೊಡೆದು ದೀಪಾವಳಿ ಹಬ್ಬ ಮಾಡುತ್ತಾರೆ. ಆದರೆ ಈ ಸಲ ದೀಪಾವಳಿ ಹಬ್ಬದ ಖುಷಿಗೆ ತೆರೆ ಬಿದ್ದಿದೆ.
ಹೌದು..ಸುಪ್ರೀಂ ಕೋರ್ಟ್ ಮಾಲಿನ್ಯರಹಿತ ಪಟಾಕಿಗಳನ್ನು ಮಾತ್ರ ಹೊಡೆಯಲು ರಾಷ್ಟ್ರವ್ಯಾಪಿ ಅನುಮತಿ ನೀಡಿದೆ. ಹೆಚ್ಚು ಶಬ್ದ ಬರುವ ಮತ್ತು ಹೆಚ್ಚು ಹೊಗೆ ಸೂಸುವ ಪಟಾಕಿಗಳಿಗೆ ಮಾತ್ರ ನಿರ್ಬಂಧ ಹೇರಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಗ್ರೀನ್ ಕ್ರ್ಯಾಕರ್ಸ್ ಗಳನ್ನು ಮಾತ್ರ ಬಳಸಬೇಕು ಅಂದರೆ ಪರಿಸರವನ್ನು ಹಾಳು ಮಾಡದಂತಹ ಪಟಾಕಿಗಳನ್ನು ಬಳಸಬೇಕು ಎಂದಿದೆ. ಅಷ್ಟೆ ಅಲ್ಲದೆ ಡೆಸಿಬಲ್ ಮಿತಿ ಕಡಿಮೆ ಇರುವ ಮತ್ತು ಮಾಲಿನ್ಯವಾಗದಂತಹ ಪಟಾಕಿಗಳನ್ನು ಬಳಸಲು ನ್ಯಾಯಾಲಯ ಅನುಮತಿಯನ್ನು ನೀಡಿದೆ. ದೀಪಾವಳಿಯಂದು ಮಾತ್ರ ಪಟಾಕಿಗಳನ್ನು ಹೊಡೆಯಬೇಕು..ಅದು ಕೂಡ ರಾತ್ರಿ 8.00 ಗಂಟೆಯಿಂದ 10.00 ಯವರೆಗೂ ಮಾತ್ರ ಅನುಮತಿಯನ್ನು ನೀಡಲಾಗಿದೆ. ಅದೇ ರೀತಿ ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬದ ದಿನದಂದು ರಾತ್ರಿ 11.45 ರಿಂದ 12.15 ವರೆಗೆ ಮಾತ್ರ ಸಮಯವನ್ನು ಕೊಟ್ಟಿದ್ದಾರೆ.. ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದ ಪೀಠವು "ಸುಧಾರಿತ ಮತ್ತು ಹಸಿರು" ಪಟಾಕಿಗಳನ್ನು ಹೊಡೆಯಲು ಮತ್ತು ಮಾರಲು ಅನುಮತಿ ನೀಡಿದೆ. ಅದೇ ರೀತಿ ಆನ್ ಲೈನ್ ಮುಖಾಂತರ ಪಟಾಕಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಆನ್ಲೈನ್ ಮಾರಾಟಕ್ಕೆ ನಿಷೇಧವನ್ನು ಹೇರಿದೆ, ನ್ಯಾಯಾಲಯದ ಈ ತೀರ್ಪಿಗೆ ಜನರ ಪ್ರತಿಕ್ರಿಯೆ ಹೀಗಿದೆ...
ಕೆಲವರು ಸುಪ್ರಿಂಕೋರ್ಟ್’ನ ಈ ತೀರ್ಪನ್ನು ಒಪ್ಪಿಕೊಂಡರೆ ಮತ್ತೆ ಕೆಲವರು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. ವರ್ಷಕ್ಕೆ ಒಮ್ಮೆ ಬರುವ ದೀಪಾವಳಿ ಹಬ್ಬದಲ್ಲೂ ಪಟಾಕಿ ಹೊಡೆಯಲು ಅನುಮತಿ ಸಿಕ್ಕಿಲ್ಲ ಎಂಬುದು ಕೆಲವರ ವಾದವಾಗಿದೆ. ಅಷ್ಟೆ ಅಲ್ಲದೆ ನೀವು ಕೊಟ್ಟಿರೋ ಟೈಮ್’ಗಿಂತ ಪಟಾಕಿನ ಜಾಸ್ತಿನೇ ಹೊಡಿಯುತ್ತೇವೆ ಏನ್ ಮಾಡ್ಕೊತೀರೋ ಮಾಡ್ಕೋಳಿ ಎಂದಿದ್ದಾರೆ. ಒಟ್ಟಾರೆ ದೀಪಾವಳಿ ಹಬ್ಬವನ್ನು ತುಂಬಾ ಜಾಗರೂಕತೆಯಿಂದ ಆಚರಿಸುವುದು ನಮ್ಮೆಲ್ಲರ ಜವಬ್ದಾರಿ ಕೂಡ ಆಗಿದೆ.
Comments