ಅತಿಯಾಗಿ ಮೊಬೈಲ್ ಬಳಸುವವರೇ ಎಚ್ಚರ.. ಈ ವಿಡಿಯೋ ನೋಡುದ್ರೆ ಶಾಕ್ ಆಗ್ತೀರಾ..!

ಮೊಬೈಲ್ ಕೈಯಲ್ಲಿ ಇದ್ರೆ ಸಾಕು.. ಜಗತ್ತನ್ನೆ ಮರೆತುಬಿಡ್ತಾರೆ.. ಆದರೆ ಮೊಬೈಲ್’ನಿಂದಾಗುವ ಪರಿಣಾಮಗಳ ಬಗ್ಗೆ ಯಾರಿಗೂ ಅರಿವೇ ಇರುವುದಿಲ್ಲ,, ಶಾಂಫೈಯಿಸ್ಟ್ ವರದಿ ಪ್ರಕಾರ ಚೀನಾದ ಹುನಾನ್ ಪ್ರಾಂತ್ಯದ ಚಂಗ್‍ಶಾ ನಗರದಲಲ್ಇ ವೀಪರೀತ ಮೊಬೈಲ್ ಬಳಕೆಯಿಂದ ಮಹಿಳೆಯೊಬ್ಬರ ಕೈಬೆರಳುಗಳು ಚಲನೆಯನ್ನೇ ಕಳೆದುಕೊಂಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಒಂದು ವಾರ ರಜೆಯ ಸಂದರ್ಭದಲ್ಲಿ ಮಹಿಳೆಯೊಬ್ಬಳು ಮೊಬೈಲ್‍ನಲ್ಲಿ ಮಗ್ನಳಾಗಿದ್ದಳು. ಪ್ರತಿ ದಿನ ರಾತ್ರಿ ನಿದ್ದೆ ಮಾಡುವಾಗ ಮಾತ್ರ ಮೊಬೈಲ್ ಮುಟ್ಟುತ್ತಿರಲಿಲ್ಲ….ಕೆಲ ದಿನಗಳ ಬಳಿಕ ಬಲಗೈಯಲ್ಲಿ ನೋವು ಕಾಣಿಸಿಕೊಂಡಿತು. ಜೊತೆಗೆ ಕೈಬೆರಳುಗಳು ಚಲನವಲನ ಕಳೆದುಕೊಂಡಿರುವುದು ಗಮನಕ್ಕೆ ಬಂತು. ಮೊಬೈಲ್ ಹಿಡಿದುಕೊಂಡ ಭಂಗಿಯಲ್ಲೇ ಬೆರಳುಗಳು ಇದ್ದವು..ಕೈಮಡಚಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ವಿಚಾರಿಸಿದಾಗ, ಒಂದೇ ಬಗೆಯಲ್ಲಿ ಅಂಗಾಂಗ ಚಲನೆಯನ್ನು ಪ್ರತಿದಿನ ಮಾಡುತ್ತಿದ್ದ ಕಾರಣ, ಟೆನೊಸಿನೋವಿಟಿಸ್ ಎಂಬ ರೋಗದಿಂದ ಆಕೆ ಬಳಲುತ್ತಿರುವುದನ್ನು ವೈದ್ಯರು ಖಾತರಿ ಪಡಿಸಿದ್ದಾರೆ. ಆದ್ದರಿಂದ ಮೊಬೈಲ್ ಅನ್ನು ಮಿತವಾಗಿ ಬಳಸಬೇಕು.
Comments